ನೀಟ್ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ: ಡಾ.ಚಿದಾನಂದಗೆ ಸಚಿವ ಕಾರಜೋಳ ಅಭಿನಂದನೆ

ದಿಗಂತ ವರದಿ ಬಾಗಲಕೋಟೆ :

ಜಿಲ್ಲೆಯ ಮುಧೋಳ ವಿಧಾನಸಭಾ ಕ್ಷೇತ್ರದ ಬೆಳಗಲಿ ಗ್ರಾಮದ ಹೆಮ್ಮೆಯ ವಿದ್ಯಾರ್ಥಿ ಡಾ.ಚಿದಾನಂದ ಕುಂಬಾರ ಬೆಳಗಲಿ ಇವರು ನೀಟ್ ಪಿ.ಜಿ ಪರೀಕ್ಷೆಯಲ್ಲಿ ಅತೀ ಹೆಚ್ಚು 759 ಅಂಕಗಳನ್ನು ಗಳಿಸುವ ಮೂಲಕ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಗಳಿಸಿ, ಕರ್ನಾಟಕದ ಕೀರ್ತಿ ಪತಾಕೆಯನ್ನು ಸಹ್ಯಾದ್ರಿಯ ಎತ್ತರಕ್ಕೆ ಏರಿಸಿದ್ದಾರೆ. ಈ ಸಂದರ್ಭದಲ್ಲಿ ಮುಧೋಳ ಶಾಸಕರು ಹಾಗೂ ಮಾನ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಕಾರಜೋಳ ರವರು ತುಂಬು ಹೃದಯದಿಂದ ಅಭಿಮಾನ ಪೂರ್ವಕವಾಗಿ ಈ ವಿದ್ಯಾರ್ಥಿಯ ಸಾಧನೆಯನ್ನು ಮೆಚ್ಚಿ ಅಭಿನಂದಿಸಿದ್ದಾರೆ. ಇಂದು ಮುಂಜಾನೆ ಮಾನ್ಯ ಸಚಿವರು ಡಾ.ಚಿದಾನಂದ ಕುಂಬಾರ ಬೆಳಗಲಿ ರವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ತಮಗಾದ ಅತೀವ ಸಂತೋಷವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಬೆಳಗಲಿರವರು ತಮ್ಮ ಎಂ.ಬಿ.ಬಿ.ಎಸ್ ಅಧ್ಯಯನದ ಸಂದರ್ಭದಲ್ಲಿ ಮಾನ್ಯ ಸಚಿವರಾದ ಗೋವಿಂದ ಕಾರಜೋಳ ರವರು ಮಾಡಿದ ಸಹಾಯ ಮತ್ತು ನೀಡಿದ ನೆರವನ್ನು ಸ್ಮರಿಸಿದರು. ಈ ಸ್ಮರಣೆಗೆ ಕೃತಜ್ಞತೆ ಸಲ್ಲಿಸಿದ ಸಚಿವರು ನೆರವು ಪಡೆದು ಈ ರೀತಿ ಅತೀ ಹೆಚ್ಚಿನ ಸಾಧನೆ ಮಾಡಿದಾಗ ನಮ್ಮ ಹೆಮ್ಮೆ ಮತ್ತು ಸಂತೋಷ ಇಮ್ಮಡಿಯಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು. ಡಾ.ಚಿದಾನಂದ ಕುಂಬಾರ ಬೆಳಗಲಿ ರವರು ಮುಂದೆ DM (Gastro enterology) ಆಯ್ದುಕೊಳ್ಳುವುದಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!