ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ಕಳೆದ ಎರಡು ತಿಂಗಳಿಂದ ಹಣ ಮಹಿಳೆಯರ ಖಾತೆಗೆ ಬಿದ್ದಿಲ್ಲ. ಹಲವರು ಈ ಬಗ್ಗೆ ಗೊಂದಲಕ್ಕೂ ಒಳಗಾಗಿದ್ದಾರೆ. ಆದರೆ ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
2 ತಿಂಗಳಿಂದ ಗೃಹಲಕ್ಷ್ಮಿ ಹಣ ಬಂದಿಲ್ಲದ ವಿಚಾರದ ಬಗ್ಗೆ ಇಂದು ವಿಧಾನಸೌಧದಲ್ಲಿ ಮಾಧ್ಯಮದ ಮುಂದೆ ಮಾತನಾಡಿದ್ದು, ಸರ್ಕಾರಿ ನೌಕರರಿಗೂ ಸಂಬಳ ಕೊಡುವಾಗಲೂ ಒಂದು ತಿಂಗಳು ಆದ ಮೇಲೆಯೇ ಇನ್ನೊಂದು ತಿಂಗಳದ್ದು ಹಾಕ್ತೀವಿ. 2 ತಿಂಗಳು ಲೇಟ್ ಆಗಿರೋದು ಸತ್ಯ. ಆದರೆ 4-5 ದಿನಗಳಲ್ಲಿ ಈ ಸಮಸ್ಯೆಯ ಪರಿಹಾರ ಮಾಡ್ತೀನಿ ಎಂದು ಹೇಳಿದ್ದಾರೆ.
ಇನ್ನು ಬಿಜೆಪಿಯವರು ಎಲೆಕ್ಷನ್‌ಗಾಗಿ ಹಣ ಹಾಕಿದ್ದೀರಿ ಎಂದು ಕಾಂಗ್ರೆಸ್ ಅನ್ನ ಆರೋಪಿಸುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಚುನಾವಣೆಗಾಗಿ ನಾವು ಹಣ ಹಾಕಲ್ಲ. ಆರೋಪ ಮಾಡೋರು ಏನೇ ಮಾಡಿದ್ರು ಆರೋಪ ಮಾಡ್ತಾರೆ. 14 ತಿಂಗಳು ಯಾವುದೇ ಎಲೆಕ್ಷನ್ ಇರಲಿಲ್ಲ. ಆದರೆ 14 ತಿಂಗಳಿಂದ ಹಣ ಹಾಕ್ತಿದ್ದೇವೆ. ಚುನಾವಣೆಗಾಗಿ ಹಣ ಹಾಕೋ ಆಗಿದ್ರೆ ಚುನಾವಣೆ ಸಮಯದಲ್ಲಿ ಮಾತ್ರ ಹಾಕ್ತಿದ್ವಿ ಅಷ್ಟೆ ಎಂದರು.