ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ UI ಸಿನಿಮಾದ ಕುರಿತು ಹೊಸ ಮಾಹಿತಿ ಹೊರಬಂದಿದ್ದು, ಡಿಸೆಂಬರ್-2 ರಂದು. ಬೆಳಗ್ಗೆ 11.07 ಗಂಟೆ ಹೊತ್ತಿಗೆ ಈ ಚಿತ್ರದ ವಾರ್ನರ್ ರಿಲೀಸ್ ಆಗುತ್ತಿದೆ.
ಸಿನಿಮಾ ಹೀರೋ ಉಪೇಂದ್ರ ವಿಶೇಷ ಮಾಹಿತಿ ಕೊಟ್ಟಿದ್ದಾರೆ. ಇದು ಟೀಸರ್ ಅಲ್ಲ..ಟ್ರೈಲರ್ ಕೂಡ ಅಲ್ಲ. ಇದು ವಾರ್ನರ್. ವಾರ್ನರ್ ಅಂತ ಒತ್ತಿ ಹೇಳಿದ್ದಾರೆ.
ಉಪೇಂದ್ರ ನಟನೆಯ ‘ಯುಐ’ ಚಿತ್ರ ಬಗ್ಗೆ ಡಿಫರೆಂಟ್ ಅನೌನ್ಸ್ ಮಾಡಿದ್ದಾರೆ. ಇದೇ ಡಿಸೆಂಬರ್ 2ಕ್ಕೆ ‘ಯುಐ’ ಚಿತ್ರದ ‘ವಾರ್ನರ್’ ಝಲಕ್ ತೋರಿಸಲು ಉಪೇಂದ್ರ ಸಜ್ಜಾಗಿದ್ದಾರೆ. ‘ವಾರ್ನರ್’ ಎಂಬುದು ಟ್ರೈಲರ್‌ಗೆ ಉಪೇಂದ್ರ ಕರೆದಿರುವ ಹೊಸ ಪದವಾಗಿದೆ. ಈ ಮೂಲಕ ಭಾರೀ ನಿರೀಕ್ಷೆ ಹುಟ್ಟಿಸಿದ್ದಾರೆ.
ತಮ್ಮ ಚಿತ್ರದ ಈ ವಾರ್ನರ್ ಬಗ್ಗೆ ಉಪೇಂದ್ರ ತಮ್ಮ ಟ್ವಿಟರ್ ಪೇಜ್ ಅಲ್ಲಿಯೇ ಹೇಳಿಕೊಂಡಿದ್ದಾರೆ. ನಮ್ಮ ಚಿತ್ರದ ವಾರ್ನರ್ ಬರ್ತಿದೆ ಅನ್ನೋದನ್ನ ಹೇಳೋಕೆ ಒಂದು ಸ್ಪೆಷಲ್ ಪೋಸ್ಟರ್ ಕೂಡ ರೆಡಿ ಆಗಿದೆ. ಆ ಪೋಸ್ಟರ್ ಅನ್ನೆ ಉಪ್ಪಿ ಈಗ ಹಂಚಿಕೊಂಡಿದ್ದಾರೆ.
ವಾರ್ನರ್ ಅಂದ್ರೆ ಏನು ಅನ್ನೋದನ್ನ ಹುಡುಕುತ್ತಾ ಹೋದ್ರೆ, ಓಲ್ಡ್ ಇಂಗ್ಲೀಷ್ ಅಲ್ಲಿ ವಾರ್ನರ್ ಅಂದ್ರೆ, ವಾರ್ನ್ ಮಾಡೋದು ಅನ್ನುವ ಅರ್ಥ ಬರುತ್ತದೆ. ನಿರಾಕರಿಸುವುದು ಅನ್ನುವ ಇನ್ನೂ ಒಂದು ಅರ್ಥ ಕೂಡ ಇದೆ. ಆದರೆ, UI ಸಿನಿಮಾ ತಂಡ ಈ ಒಂದು ವಾರ್ನರ್ ಅನ್ನ ಯಾವ ಅರ್ಥದಲ್ಲಿ ಹೇಳುತ್ತಿದ್ದಾರೆ ಏನೋ? ಆದರೆ, ಕ್ಯೂರಿಯೋಸಿಟಿಯನ್ನ ಹುಟ್ಟುಹಾಕಿದೆ.
UI ಸಿನಿಮಾದ ರಿಲೀಸ್ ಡೇಟ್ ಈಗಾಗಲೇ ಅನೌನ್ಸ್ ಆಗಿದೆ. ಡಿಸೆಂಬರ್-20 ರಂದು ವಿಶ್ವದಾದ್ಯಂತ UI ಸಿನಿಮಾ ರಿಲೀಸ್ ಆಗಿದೆ. ಉಪ್ಪಿ ಕಲ್ಪನೆಯ UI ಸಿನಿಮಾ ಹೊಸದೊಂದು ಕುತೂಹಲ ಹುಟ್ಟಿಸಿದೆ.