ಹೊಸದಿಗಂತ ವರದಿ,ವಿಜಯಪುರ:
ಪಂಚಮಸಾಲಿ ಸಮಾಜ ಬಿಟ್ಟು ನಾನಿಲ್ಲ. ಯಾವುದೇ ಸರ್ಕಾರ ಇದ್ದರೂ ಅತೀಯಾಗಿದೆ ಎನ್ನುವ ರೀತಿ ಹೋರಾಟ ಮಾಡಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪರೋಕ್ಷವಾಗಿ ಕೂಡಲ ಸಂಗಮ ಶ್ರೀಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸರ್ಕಾರದಲ್ಲಿದ್ದರೂ ಸಹ ಹೋರಾಟದಲ್ಲಿ ಭಾಗಿಯಾಗಿದ್ದೇವು ಎಂದರು.
ಉಪಚುನಾವಣೆ ಕ್ಷೇತ್ರಗಳಿಗೆ ಮಾತ್ರ ಗೃಹ ಲಕ್ಷ್ಮೀ ಹಣ ಹಾಕಿದ್ದಾರೆ ಎನ್ನುವ ಆರೋಪ ವಿಚಾರಕ್ಕೆ, ನೀವು ಎಲ್ಲ ಜಿಲ್ಲೆಗಳಲ್ಲಿ ಚೆಕ್ ಮಾಡಿ ಎಂದು ತಿಳಿಸಿದರು.
ಸಚಿವ ಸಂಪುಟ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ನಾನು ಹೈಕಮಾಂಡ್ ಅಲ್ಲ, ಪಕ್ಷದ ಅಧ್ಯಕ್ಷರೂ ಅಲ್ಲ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.