ಅತ್ಯಾಚಾರ ಆರೋಪ: ಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ ಅಮಾನತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತ್ಯಾಚಾರ ಕೇಸ್​ನಲ್ಲಿ ಆಸ್ಟ್ರೇಲಿಯಾದಲ್ಲಿ ಬಂಧನಕ್ಕೆ ಒಳಪಟ್ಟಿರುವ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ ಅವರನ್ನು ಎಲ್ಲ ಪ್ರಕಾರದ ಕ್ರಿಕೆಟ್​ನಿಂದ ಅಮಾನತು ಮಾಡಿ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಆದೇಶಿಸಿದೆ.

ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್​ ಟೂರ್ನಿವೇಳೆ ಶ್ರೀಲಂಕಾ ತಂಡದ ಎಡಗೈ ಬ್ಯಾಟರ್​ ಆಗಿರುವ ಗುಣತಿಲಕ ಅವರನ್ನು ಸಿಡ್ನಿ ನಗರ ಪೊಲೀಸರು ಭಾನುವಾರ ಬಂಧಿಸಿದ್ದರು.

ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ ಮೂಲಕ 29 ವರ್ಷದ ಮಹಿಳೆಯೊಬ್ಬರ ಪರಿಚಯವಾಗಿದೆ. ನ.2ರಂದು ಆ ಮಹಿಳೆ ಮೇಲೆ ರೋಸ್​ ಬೇನಲ್ಲಿರುವ ನಿವಾಸದಲ್ಲಿ ಗುಣತಿಲಕ ಅವರು ಅತ್ಯಾಚಾರ ಮಾಡಿದ್ದಾರೆ ಎಂದು ಕೇಸ್​ ದಾಖಲಾಗಿದೆ.

ಆನ್​ಲೈನ್​ನಲ್ಲೇ ಹಲವಾರು ದಿನಗಳವರೆಗೆ ಸಂವಹನ ನಡೆಸಿದೆವು. ಬಳಿಕ ಇಬ್ಬರೂ ಭೇಟಿಯಾದೆವು. ನ.2ರ ಸಂಜೆ ನನ್ನ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ.

2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಣತಿಲಕ ಪಾದರ್ಪಣೆ ಮಾಡಿದ್ದರು. ಟಿ20 ವಿಶ್ವಕಪ್​ ಟೂರ್ನಿ ಹಿನ್ನೆಲೆ ಆಸ್ಟ್ರೇಲಿಯಾಕ್ಕೆ ಆಗಮಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!