ನಿಮ್ಮ ರಾಜಕೀಯಕ್ಕೆ ಕೇಸರಿ ವಿಚಾರವೇ ಬೇಕೆ?: ವಿಪಕ್ಷಗಳ ವಿರುದ್ಧ ಸಚಿವ ನಾಗೇಶ್‌ ಸಿಡಿಮಿಡಿ

ಹೊಸದಿಗಂತ ವರದಿ, ಚಿಕ್ಕೋಡಿ
ಕೊರೋನಾದಿಂದ ಹಿನ್ನಡೆಯಾದ ಶಿಕ್ಷಣರಂಗ ಚೇತರಿಕೆ ಕಾಣಲು ಅವಶ್ಭಯಕವಿದ್ದಲ್ಲಿ ಭಗವದ್ಗೀತೆ  ಅಳವಡಿಸುವುದರಲ್ಲಿ, ಕೇಸರೀಕರಣದಲ್ಲಿ ತಪ್ಪೇನಿದೆ. ಮಕ್ಕಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಭಗವತ್ ಗೀತೆ ಅಳವಡಿಸಲಾಗುವುದು. ಹಸಿರು, ಬಿಳಿ ಬಣ್ಣದಲ್ಲಿಲ್ಲದ ರಾಜಕೀಯವು ಕೇಸರಿ ಬಣ್ಣದಲ್ಲೇಕೆ ಎಂದು ಶಿಕ್ಷಣ ಸಚಿವ ಬಿ.ಸಿ‌ ನಾಗೇಶ್ ವಿಪಕ್ಷಗಳ ವಿರುದ್ಧ ಕಿಡಿಕಾರಿದರು.
ಚಿಕ್ಕೋಡಿ ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ಕಲಿಕಾ ಚೇತರಿಕೆ ಯೋಜನೆಯ ಚಾಲನಾ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾವಿನ ವಿಚಾರದಲ್ಲಿ ರಾಜಕೀಯ ಮಾಡುವ ಪಕ್ಷ ಬಿ.ಜೆ.ಪಿ ಅಲ್ಲ. ನೈತಿಕತೆಯ ಪಾಠ ಬೇರೆ ಪಕ್ಷಗಳಿಂದ ಕಲಿಯಬೇಕಿಲ್ಲ. ನಮ್ಮ ಪಕ್ಷದ ಹಿರಿಯರು ನಮಗೆ ಏನು ಮಾಡಬೇಕೆನ್ನುವ ನೀತಿಪಾಠ ಹೇಳಿಕೊಟ್ಟಿದ್ದಾರೆ. 40 ಪರ್ಸೆಂಟ್ ಸರಕಾರ ಎಂಬ ಆರೋಪ ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವ‌, ಯಾವುದೇ ಪುರಾವೆ ಇಲ್ಲದೆ ಹೇಗೆ ಆರೋಪ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!