ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಲಿಬ್ರಿಟಿಗಳು, ಸಚಿವ ಸಂಪುಟ ಸಹೋದ್ಯೋಗಿ, ವಿಧಾನ ಪರಿಷತ್ ಸದಸ್ಯರು, ಸಂಘ ಸಂಸ್ಥೆಗಳು ಗೋವುಗಳನ್ನು ದತ್ತು ಪಡೆಯಬೇಕು ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ. ಚೌವ್ಹಾಣ್ ಕರೆ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ಜನ್ಮದಿನದ ಅಂಗವಾಗಿ ರಾಷ್ಟ್ರೋತ್ಥಾನ ಗೋಶಾಲೆಯ 11 ಗೋವುಗಳನ್ನು ಆಜೀವ ದತ್ತು ಪಡೆಯುವುದರ ಮೂಲಕ ಅರ್ಥಪೂರ್ಣ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
ಈ ನಡೆಯನ್ನು ನಾವೆಲ್ಲರೂ ಪ್ರೇರಣೆ ಹಾಗೂ ಆದರ್ಶವಾಗಿರಿಸಿಕೊಂಡು ಗೋವುಗಳನ್ನು ದತ್ತು ಸ್ವೀಕರಿಸುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದ್ದಾರೆ.
ಚಿತ್ರರಂಗದ ಸೆಲಿಬ್ರಿಟಿಗಳು, ಸಚಿವರು, ಉದ್ದಿಮೆದಾರರು, ಸಂಘ ಸಂಸ್ಥೆಗಳು, ಲೋಕಸಭಾ, ರಾಜ್ಯಸಭಾ ಸದಸ್ಯರು ಗೋವುಗಳನ್ನು ದತ್ತು ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಸಚಿವ ಪ್ರಭು ಚವ್ಹಾಣ್ ಅವರು ಕೂಡ ಕಳೆದ ವರ್ಷ ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೀದರ್ ನ ಶ್ರೀರಾಮಕೃಷ್ಣ ಆಶ್ರಮದ 21 ಗೋವುಗಳನ್ನು ದತ್ತು ಪಡೆದಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ