November 13, 2026
Friday, November 13, 2026
spot_img

ಸಚಿವ ಪ್ರದೀಪ್‌ ಈಶ್ವರ್‌ಗೆ ಕಾಲು ಮುರಿತ : ಆರು ವಾರಗಳ ಬೆಡ್‌‌ ರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್‌ ಈಶ್ವರ್‌ ಕಾಲು ಮುರಿತಕ್ಕೆ ಒಳಗಾಗಿದ್ದು, ಆರು ವಾರಗಳ ಕಾಲ ಬೆಡ್‌ ರೆಸ್ಟ್‌ನಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖುದ್ದು ಪ್ರದೀಪ್‌ ಈಶ್ವರ್‌ ಪೋಸ್ಟ್‌ ಮಾಡಿದ್ದು, ಕಾಲು ಮುರಿದು ಹಾಸಿಗೆಯ ಮೇಲಿರುವ ಫೋಟೊವೊಂದನ್ನು ಪೋಸ್ಟ್‌ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದೆ. ವೈದ್ಯರು 6 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಹಾಗಂತ ಕೆಲಸ ಕಾರ್ಯಗಳನ್ನು ನಿಲ್ಲಿಸೋದಕ್ಕೆ ಆಗುವುದಿಲ್ಲ. ಕೆಲಸ ಆಗಬೇಕು ಅಂದರೆ ಏನಾದರೂ ಒಂದು ದಾರಿಯನ್ನು ಹುಡುಕಿಕೊಳ್ಳಗಬೇಕು ಎಂದು ತರಗತಿಯೊಳಗೇ ಒಂದು ಹಾಸಿಗೆಯ ವ್ಯವಸ್ಥೆ ಮಾಡಿಕೊಂಡು ಅಲ್ಲಿಂದಲೇ ವಿದ್ಯಾರ್ಥಿಗಳೊಂದಿಗೆ ಸಂವಾದ ಮುಂದುವರಿಸುತ್ತಾ ಪಾಠ ಮಾಡುತ್ತಿದ್ದಾರೆ. ಜೊತೆಗೆ ಕ್ಷೇತ್ರದ ಕೆಲಸಗಳನ್ನು ಕುಳಿತಲ್ಲಿಂದಲೇ ಮಾಡುತ್ತಿದ್ದಾರೆ.

ಕಾಲು ಮುರಿದಿದೆ ಅಷ್ಟೇ ಉತ್ಸಾಹ ಕುಗ್ಗಿಲ್ಲ. ಆರು ವಾರಗಳಷ್ಟೇ. ಇನ್ನಷ್ಟು ಗಟ್ಟಿಯಾಗಿ ನಿಮ್ಮ ಮುಂದೆ ಬರುತ್ತೇನೆ. ಕೆಲಸ ಮಾಡುತ್ತೇನೆ. ಕಾಯಕವೇ ಕೈಲಾಸ ಎಂದು ಟ್ವೀಟ್‌ ಮಾಡಿದ್ದಾರೆ.

Must Read