ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಚರ್ಚೆ ಹಾಗೂ ವಿವಾದವನ್ನು ಹುಟ್ಟುಹಾಕಿರುವ ದಿ ಕೇರಳ ಸ್ಟೋರಿ ಸಿನಿಮಾವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಕುಟುಂಬದವರ ಜೊತೆ ವೀಕ್ಷಿಸಿದ್ದಾರೆ.
ನಿನ್ನೆಯವರೆಗೂ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಜೋಶಿ ಇಂದು ತಮ್ಮ ಕುಟುಂಬ ಸಮೇತ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿದ್ದಾರೆ.
ಬಹಳ ಒಳ್ಳೆಯ ಸಿನಿಮಾ, ನೈಜತೆ ಎದ್ದು ಕಾಣುತ್ತದೆ ಎಲ್ಲರೂ ನೋಡುವಂಥ ಸಿನಿಮಾ ಇದು ಎಂದು ಅಭಿಪ್ರಾಯ ಹೇಳಿದ್ದಾರೆ.ಕೇರಳದಲ್ಲಿ ಹೇಗೆ ಬೇರೆ ಧರ್ಮದ ಯುವತಿಯರನ್ನು ಪುಸಲಾಯಿಸಿ ಐಸಿಸ್‌ಗೆ ಸೇರಿಸಿಕೊಳ್ಳುತ್ತಾರೆ ಎನ್ನುವ ಚಿತ್ರಣ ಇಲ್ಲಿದೆ ಎಂದಿದ್ದಾರೆ.