June 25, 2026
Thursday, June 25, 2026
spot_img

ಬರೀ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ಬಾಲಕಿಗೆ ಹೆರಿಗೆ! ಪ್ರೆಗ್ನೆಂಟ್‌ ಅನ್ನೋದು ಅವಳಿಗೇ ಗೊತ್ತಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಂಜಾಬ್‌ನ ಜಲಂಧರ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬಾಲಕಿಯೊಬ್ಬಳಿಗೆ ಒಂಬತ್ತು ತಿಂಗಳ ಕಾಲ ತಾನು ಗರ್ಭಿಣಿ ಅನ್ನೋದೇ ಗೊತ್ತಿಲ್ಲದೆ ಡೆಲಿವರಿ ಕೂಡ ಆಗಿಹೋಗಿದೆ!

ಹೌದು, ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಗೆ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾಳೆ. ಆಕೆಯ ಹೇಳಿಕೆಯ ಅನ್ವಯ ಅಮೃತಸರ ಮೂಲದ ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.

ಮಗಳಿಗೆ ಹೊಟ್ಟೆನೋವೆಂದು ಆಸ್ಪತ್ರೆಗೆ ಕರೆದುಕೊಂಡು ಬಂದ ಪೋಷಕರು ಅಜ್ಜ ಅಜ್ಜಿಯಾಗಿದ್ದಾರೆ. ಈ ವಿಷಯವನ್ನು ಅವರು ಅರಗಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ. ಇದರ ಜೊತೆಗೆ ಮಗಳನ್ನು ಈ ಸ್ಥಿತಿಗೆ ಬಲವಂತಪಡಿಸಿದವನ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ.

ಒಂದು ತಿಂಗಳಿನಿಂದ ಹೊಟ್ಟೆನೋವೆಂದು ಹೇಳುತ್ತಲೇ ಇದ್ದ ಬಾಲಕಿ ಗರ್ಭಿಣಿ ಎಂದು ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಇಡೀ ಕುಟುಂಬ ಶಾಕ್‌ನಲ್ಲಿದೆ. ಇದೀಗ ಪೊಲೀಸರು ಆರೋಪಿ ಯುವಕನಿಗಾಗಿ ಹುಡುಕಾಡುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !