September 13, 2026
Sunday, September 13, 2026
spot_img

ಚಲಿಸುವ ಬಸ್‌ನಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ರೇ*ಪ್‌! ದೆಹಲಿಯ ಬಸ್‌ಗಳಿಗೆ ಹೊಸ ಖಡಕ್‌ ರೂಲ್ಸ್‌ ಸೆಟ್‌ ಮಾಡಿದ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಚಲಿಸುತ್ತಿರುವ ಬಸ್‌ನಲ್ಲೇ ಚಾಲಕ ಹಾಗೂ ಕಂಡಕ್ಟರ್‌ ಅತ್ಯಾಚಾರ ಎಸಗಿದ್ದರು. ಈ ಘಟನೆಯ ಗಂಭೀರತೆ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಬಸ್‌ಗಳಿಗೆ ಸ್ಟ್ರಿಕ್ಟ್‌ ರೂಲ್ಸ್‌ ಜಾರಿಗೆ ಮಾಡಿದೆ.

ಇನ್ಮುಂದೆ ದೆಹಲಿಯಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳಲ್ಲಿಯೂ ಪ್ಯಾನಿಕ್‌ ಬಟನ್‌ ಕಡ್ಡಾಯವಾಗಿದೆ. ಇದರ ಜೊತೆಗೆ ಬಸ್‌ನಲ್ಲಿ ಟ್ರ್ಯಾಕಿಂಗ್‌ ಸಾಧನಗಳು ಸದಾ ವರ್ಕಿಂಗ್‌ ಕಂಡೀಷನ್‌ನಲ್ಲಿಯೇ ಇರಬೇಕು ಎಂದು ಸಾರಿಗೆ ಇಲಾಖೆ ಖಡಕ್‌ ಸೂಚನೆ ನೀಡಿದೆ.

ಬಸ್‌ಗಳ ಕಿಟಕಿಗೆ ಕರ್ಟನ್‌ ಬೇಡ

ಇನ್ನು ಸ್ಲೀಪರ್‌ ಹಾಗೂ ಸೆಮಿಸ್ಲೀಪರ್‌ ಬಸ್‌ಗಳಲ್ಲಿ ಕಿಟಕಿಗೆ ಪರದೆ ಹಾಕಲಾಗುತ್ತದೆ. ಇದರಿಂದ ಒಳಗೆ ಏನಾಗುತ್ತಿದೆ ಎನ್ನುವುದು ಯಾರ ಗಮನಕ್ಕೂ ಬರುವುದಿಲ್ಲ. ದೆಹಲಿಯ ಸ್ಲೀಪರ್‌ ಬಸ್‌ನಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ಅತ್ಯಾಚಾರದ ವೇಳೆ ಪರದೆಗಳು ಇರದೇ ಹೋಗಿದ್ದರೆ ರಸ್ತೆಯಲ್ಲಿ ಹೋಗುವ ಯಾರೋ ಗಮನಿಸಿ ಪೊಲೀಸ್‌ ಇಲಾಖೆಗೆ ದೂರು ನೀಡಿರುತ್ತಿದ್ದರು. ಹೀಗಾಗಿ ಇನ್ಮುಂದೆ ಬಸ್‌ಗಳಲ್ಲಿ ಕರ್ಟನ್‌ ಹಾಕುವಂತಿಲ್ಲ. ಒಳಗಿನ ದೃಶ್ಯ ಹೊರಕ್ಕೆ ಕಾಣಿಸಬೇಕು. ಪಾರದರ್ಶಕತೆ ಕಾಪಾಡಬೇಕು ಎಂದು ಹೇಳಿದೆ.

ಅತ್ಯಾಚಾರ ಪ್ರಕರಣದ ಅಪ್ಡೇಟ್ಸ್‌

ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕತ್ತಲ ರಸ್ತೆಯಲ್ಲಿ ಬಿಟ್ಟು ಹೋಗಿದ್ದ ಬಸ್‌ ಡ್ರೈವರ್‌ ಹಾಗೂ ಕಂಡಕ್ಟರ್‌ನ್ನು ಅರೆಸ್ಟ್‌ ಮಾಡಲಾಗಿದೆ. ಮಳೆಯಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಬಾಲಕಿಯನ್ನು ಕಂಡಕ್ಟರ್‌ ನೀವು ಹೋಗುವ ರೂಟ್‌ನಲ್ಲೇ ಹೋಗ್ತಿದ್ದೀವಿ ಬನ್ನಿ ಎಂದು ಹತ್ತಿಸಿಕೊಂಡಿದ್ದರು. ಆನಂತರ ಲೈಂಗಿಕ ಕಿರುಕುಳ ನೀಡಿ, ಕಂಡಕ್ಟರ್‌ ಹಾಗೂ ಡ್ರೈವರ್‌ ಇಬ್ಬರೂ ಅತ್ಯಾಚಾರ ಎಸಗಿದ್ದರು. ಬಾಲಕಿಯನ್ನು ಸಿಟಿಯಿಂದ 40 ಕಿ.ಮೀ ದೂರದಲ್ಲಿ ಬಿಟ್ಟು ಬಂದಿದ್ದರು. ಆಕೆ ಅಲ್ಲಿಂದ ನಿತ್ರಾಣಳಾಗಿ ಬಂದು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಳು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !