ಹಿಜಾಬ್ ವಿವಾದ ಕಾಂಗ್ರೆಸ್ ನಿಂದ ದುರ್ಬಳಕೆ: ಸಚಿವ ಬಿ.ಸಿ.ಪಾಟೀಲ್

ಹೊಸದಿಗಂತ ವರದಿ,ಚಿತ್ರದುರ್ಗ

ಹಿಜಾಬ್ ಹಾಗೂ ಶಾಲು ವಿವಾದವನ್ನು ಕಾಂಗ್ರೇಸ್ ತನ್ನ ಸ್ವಾರ್ಥಕ್ಕಾಗಿ ಬಳಕೆ ಮಾಡುತ್ತಿದೆ. ಆದರೆ ಬಿಜೆಪಿಗೆ ಅಂತಹ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದ ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿಲ್ಲ. ಈ ಬಗ್ಗೆ ಸರ್ಕಾರ ಆದೇಶ ನೀಡಿದೆ. ಎಲ್ಲರೂ ಸಮವಸ್ತ್ರ ಧರಿಸಿ ಬರಬೇಕೆಂದು ಸೂಚಿಸಲಾಗಿದೆ. ಅದರಂತೆ ನ್ಯಾಯಾಲಯವೂ ಸಹ ತಾತ್ಕಾಲಿಕವಾಗಿ ತೀರ್ಪುವನ್ನು ಎತ್ತಿ ಹಿಡಿದಿದೆ. ಯಾರೂ ಸಹ ಧಾರ್ಮಿಕ ವಸ್ತ್ರ ಧರಿಸಿ ಬರಬಾರದು. ನ್ಯಾಯಾಲಯದ ಆದೇಶವನ್ನು ಸರ್ಕಾರ ಪಾಲಿಸಲಿದೆ ಎಂದು ತಿಳಿಸಿದರು.
ಈ ಪ್ರಕರಣವನ್ನು ಕಾಂಗ್ರೇಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಪ್ರಚೋದನೆ ಮಾಡುವ ಕೆಲಸ ಕಾಂಗ್ರೇಸ್ ಮಾಡುತ್ತಿದೆ. ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಇದೆಲ್ಲಾ ಉಹಾಪೂಹ ದಿನಕ್ಕೊಬ್ಬರು ದೆಹಲಿಗೆ ಹೋಗುತ್ತಾರೆ, ಬರುತ್ತಾರೆ. ಅಂದ ಮಾತ್ರಕ್ಕೆ ಮುಖ್ಯಮಂತ್ರಿ ಬದಲಾವಣೆಯಾಗುತ್ತದೆ ಎಂದಲ್ಲ ಎಂದು ಸ್ಪಷ್ಟಪಡಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಬೇಕು. ಈ ಕುರಿತು ಶಾಸಕರ ಹಾಗೂ ಮುಖ್ಯಮಂತ್ರಿ ಅವರ ಜೊತೆಯಲ್ಲಿ ಚರ್ಚೆ ಮಾಡಲಾಗುವುದು. ಇತ್ತೀಚೆಗೆ ದೆಹಲಿಯಲ್ಲಿ ಸಂಬಂಧಪಟ್ಟವರನ್ನು ಸಿಎಂ. ಭೇಟಿ ಮಾಡಿದ್ದಾರೆ. ಇದರ ಬಗ್ಗೆ ಸಿ.ಎಂ. ಅವರನ್ನು ಒತ್ತಾಯ ಮಾಡಲಾಗುವುದು. ಈಗಾಗಲೇ ೫೮ ಕಿ.ಮೀ. ಆಗಿದೆ. ನಮ್ಮ ಸರ್ಕಾರದಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡುವ ಮೂಲಕ ಜನರಿಗೆ ನೀರು ಕೊಡಲಾಗುವುದು. ಎಂದು ಹೇಳಿದರು.
ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿದ್ದು, ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದೆ. ರೇವಣ್ಣ, ಕಾಂಗ್ರೇಸ್‌ನವರಾಗಲಿ ಬಿಜೆಪಿಯನ್ನು ಹೊಗಳಲು ಸಾಧ್ಯವಿಲ್ಲ. ಅವರು ನಮ್ಮನ್ನು ತೆಗಳಿದರೆ ಅವರು ಮೇಲೆ ಬರುತ್ತೇವೆ ಎಂದು ತಿಳಿದಿದ್ದಾರೆ. ಆದರೆ ಅದು ತಪ್ಪು ಕಲ್ಪನೆ. ಮುಜರಾಯಿ ಇಲಾಖೆ ವತಿಯಿಂದ ದೈವ ಸಂಕಲ್ಪ ಯೋಜನೆಯಡಿ ರಾಜ್ಯದಲ್ಲಿ ೨೫ ದೇವಾಲಯಗಳನ್ನು ಕಾಶಿ ಮಾದರಿಯಲ್ಲಿ ಅಭಿವೃಧ್ದಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ನಾಯಕನಹಟ್ಟಿ ದೇವಾಲಯವನ್ನು ಎ ಗ್ರೇಡ್‌ನಲ್ಲಿದೆ ಸಾಕಷ್ಟು ಆದಾಯವಿದೆ. ಆದರೂ ಕೈಬಿಡಲಾಗಿದೆ ಎಂಬ ಪ್ರಶ್ನೆಗೆ ಇದರ ಬಗ್ಗೆ ಚರ್ಚೆ ಮಾಡಿ ಹೇಳಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ವಿದಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧ್ಯಕ್ಷ ಎ.ಮುರುಳಿ, ನಂದಿ ನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!