ಹೊಸದಿಗಂತ ವರದಿ ವಿಜಯಪುರ:
ನಗರದ ಗಣಪತಿ ಚೌಕ್ ನಲ್ಲಿನ ಗಣಪತಿ ದೇವಸ್ಥಾನಕ್ಕೆ ಕಿಡಿಗೇಡಿಗಳು ಕಲ್ಲು ಎಸೆದಿದ್ದು, ಎರಡು ಭಾಗದ ಗಾಜುಗಳು ಪುಡಿಪುಡಿಯಾಗಿರುವ ಘಟನೆ ನಡೆದಿದೆ.
ಇಲ್ಲಿನ ಸಿದ್ಧೇಶ್ವರ ದೇವಸ್ಥಾನ ಬಳಿಯ ಗಣಪತಿ ಚೌಕ್ ನಲ್ಲಿ ಚತುರ್ಮುಖ ಗಣಪನ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಕೆಲ ವರ್ಷಗಳ ಹಿಂದೆ ಈ ದೇವಸ್ಥಾನ ನವೀಕರಿಸಲಾಗಿದೆ. ನಗರದಲ್ಲಿ ಇದು ತುಂಬಾ ಹಳೇ ವೃತ್ತವಾಗಿದೆ.
ಇಲ್ಲಿನ ದೇವಸ್ಥಾನಕ್ಕೆ ಯಾರೋ ಕಿಡಿಗೇಡಿಗಳು ಕಲ್ಲು ಎಸೆದು ಹಾನಿಗೊಳಿಸಿದ್ದಾರೆ. ಸ್ಥಳಕ್ಕೆ ಗಾಂಧಿಚೌಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.