ಹೊಸದಿಗಂತ ವರದಿ ಕಲಬುರಗಿ:
ಬರೋಬ್ಬರಿ ನಾಲ್ಕು ವರ್ಷಗಳ ನಂತರ ಕಲಬುರಗಿ ನಗರದಲ್ಲಿ 402 ಸಿವಿಲ್ ಪಿಎಸ್ಐ ಹುದ್ದೆಗಳಿಗೆ ಪರೀಕ್ಷೆ ನಡೆಯುತ್ತಿದ್ದು, ಬಿಗಿ ಪೋಲಿಸ್ ಬಂದೋಬಸ್ತ್ ನಡುವೆ ಮಧ್ಯೆ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿ ಒಳಗಡೆ ಬಿಡಲಾಗಿದೆ.
545 ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದ ಕಳಂಕವನ್ನು ಹೊತ್ತಿದ ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿಯ 402 ಪಿಎಸ್ಐ ಹುದ್ದೆಗೆ ಪರೀಕ್ಷೆ ಗುರುವಾರ ಬೆಳಗ್ಗೆ 10:30ಕ್ಕೆ ಆರಂಭವಾಗಿದೆ.
ಕಲಬುರಗಿ ನಗರದ 26 ಕೇಂದ್ರಗಳಲ್ಲಿ 402 ಪಿಎಸ್ಐ ಪರೀಕ್ಷೆ ಕೇಂದ್ರವನ್ನು ಗುರುತಿಸಿ, ತೀವ್ರ ತಪಾಸಣೆ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಒಳಗಡೆ ಬಿಡಲಾಗಿದೆ.
ಇನ್ನೂ ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತ ಮುತ್ತ 144 ನಿಷೇಧ ಆಜ್ಞೆ ಹೊರಡಿಸಿ, ಸೂಕ್ತ ಭದ್ರತೆ ಒದಗಿಸುವಂತೆ ಜಿಲ್ಲಾಧಿಕಾರಿ ಡಿಸಿ ಫೌಜಿಯಾ ತರನ್ನುಮ ಈ ಮೊದಲೇ ಆದೇಶ ಹೊರಡಿಸಿದ್ದರು.
ಈ ಬಾರಿಯ 402ಸಿವಿಲ್ ಪಿಎಸ್ಐ ಹುದ್ದೆಗಳಿಗೆ ನಡೆಯುತ್ತಿರುವ ಪರೀಕ್ಷೆಗೆ 7348 ಪುರುಷರು, 1779 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 9017 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.