ಬೀದಿನಾಯಿಗಳ ಜನನಾಂಗಕ್ಕೆ ಪೆಟ್ರೋಲ್ ಎರಚಿ ಚಿತ್ರಹಿಂಸೆ ನೀಡಿದ ಕಿಡಿಗೇಡಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಮಧ್ಯಪ್ರದೇಶದ ಇಂದೋರ್‌ನಲ್ಲಿ ಬೀದಿನಾಯಿಗಳ ಮರ್ಮಾಂಗಕ್ಕೆ ಪೆಟ್ರೋಲ್ ಎರಚಿದ ಘಟನೆ ನಡೆದಿದೆ. ಈ ಬಗ್ಗೆ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ಮಾಹಿತಿ ನೀಡಿದ್ದಾರೆ.

ಈ ಕ್ರೌರ್ಯದ ಕೃತ್ಯದಿಂದ ನಾಯಿಗಳು ನೋವಿನಿಂದ ನರಳುತ್ತಿದ್ದವು ಎಂದು ಸಂಯೋಗಿತಗಂಜ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, ಜೌರಾ ಕಂಪೌಂಡ್‌ನಲ್ಲಿರುವ ಡೇರಿಯೊಂದರ ಇಬ್ಬರು ನೌಕರರು ಬೀದಿನಾಯಿಗಳ ಜನನಾಂಗದ ಮೇಲೆ ಪೆಟ್ರೋಲ್ ಎರಚಿ ಬಹಳ ದಿನಗಳಿಂದ ಚಿತ್ರಹಿಂಸೆ ನೀಡುತ್ತಿದ್ದರು. ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯ ಇಂದೋರ್ ಘಟಕದ ಅಧ್ಯಕ್ಷ ಪ್ರಿಯಾಂಶು ಜೈನ್ ಮಂಗಳವಾರ ರಾತ್ರಿ ಸಂಯೋಗಿತಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರ ಆಧಾರದ ಮೇಲೆ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಜಾವೋರಾ ಕಾಂಪೌಂಡ್ ಪ್ರದೇಶದಲ್ಲಿರುವ ಡೈರಿಯೊಂದರ ಇಬ್ಬರು ಉದ್ಯೋಗಿಗಳು ಬೀದಿನಾಯಿಗಳ ಜನನಾಂಗಕ್ಕೆ ಸಿರಿಂಜ್ ನಿಂದ ಪೆಟ್ರೋಲ್ ಸಿಂಪಡಿಸುವ ಮೂಲಕ ದೀರ್ಘಕಾಲದಿಂದ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಆರೋಪಿಗಳು ನಾಯಿಗಳು ನರಳುವುದನ್ನು ನೋಡಿ ತುಂಬಾ ಖುಷಿಪಡುತ್ತಿದ್ದರು. ತಮ್ಮ ಸಂತೋಷಕ್ಕಾಗಿ ನಾಯಿಗಳಿಗೆ ತೀವ್ರ ನೋವು ನೀಡುತ್ತಿದ್ದರು. ಈ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪ್ರಿಯಾಂಶು ಜೈನ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!