Thursday, December 8, 2022

Latest Posts

ಅಪ್ಪು ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಅಶ್ವಿನಿ ಪುನೀತ್‌ರಾಜ್ ಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಮೂರನೇ ದಿನವಾದ ಇಂದು (ಸೆಪ್ಟಂಬರ್ 28) ಹಲವು ಕಾರ್ಯಕ್ರಮಗಳಲ್ಲಿ ಅಪ್ಪು ಸ್ಮರಣೆ ಮಾಡಲಾಗಿದೆ.

ಇಂದು ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಚಲನಚಿತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪುನೀತ್ ನಟನೆಯ ಬೆಟ್ಟದ ಹೂ, ರಾಜಕುಮಾರ, ರಣವಿಕ್ರಮ, ಯುವರತ್ನ ಚಿತ್ರ ಪ್ರದರ್ಶನದ ಮೂಲಕ ಸಿನಿಮಾ ಪ್ರದರ್ಶನದ ಮೂಲಕ ಅಪ್ಪುಗೆ ನಮನ ಸಲ್ಲಿಸಲಾಯಿತು.
ನಗರದ ಐನಾಕ್ಸ್ ಚಿತ್ರಮಂದಿರದಲ್ಲಿ ನಡೆದ ಅಪ್ಪು ಚಲನಚಿತ್ರೋತ್ಸವಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಚಾಲನೆ ನೀಡಿದರು. ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅಭಿಮಾನಿಗಳ ಜೊತೆ ಕೂತು ಕೆಲಕಾಲ ರಾಜಕುಮಾರ ಸಿನಿಮಾ ವೀಕ್ಷಣೆ ಮಾಡಿದ್ರು.

ಅಲ್ಲದೇ ಇಂದಿನಿಂದ ಯುವದಸರಾ ಆರಂಭ ಹಿನ್ನೆಲೆ ಮಹಾರಾಜ ಕಾಲೇಜು ಮೈದಾನದಲ್ಲಿ ಅಪ್ಪು ಡ್ಯಾನ್ಸ್ ಮಾಡುವ ಬೃಹತ್ ಕಟೌಟ್ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಮೂಲದ ಅಪ್ಪು ಅಭಿಮಾನಿ ಮಾರುತಿ, ಪುನೀತ್ ನೃತ್ಯ ಮಾಡುವ 50 ಅಡಿ ಬೃಹತ್ ಕಟೌಟ್ ನಿರ್ಮಿಸಿ ತಮ್ಮ ಅಭಿಮಾನ ಮೆರೆದಿದ್ದಾರೆ. ಇದು ಅಪ್ಪು ಅಭಿಮಾನಿಗಳು ಸಂತಸಕ್ಕೆ ಕಾರಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!