Sunday, December 10, 2023

Latest Posts

ಟ್ರ್ಯಾಕ್ ಮೇಲೆ ಕಲ್ಲು, ರಾಡ್‌ಗಳನ್ನಿಟ್ಟ ಕಿಡಿಗೇಡಿಗಳು: ಎಚ್ಚೆತ್ತ ಪೈಲಟ್, ತಕ್ಷಣವೇ ವಂದೇ ಭಾರತ್ ರೈಲು ನಿಲುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜೈಪುರದಲ್ಲಿ ರೈಲ್ವೆ ಹಳಿಯ (Railway Track) ಮೇಲೆ ದುಷ್ಕರ್ಮಿಗಳು ಕಲ್ಲು (Stones) ಹಾಗೂ ರಾಡ್‌ಗಳನ್ನಿಟ್ಟು (Rod) ಅಡಚಣೆಗೆ ಪ್ರಯತ್ನಿಸಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ವಂದೇ ಭಾರತ್ ರೈಲಿನ (Vande Bharat Express Train) ಪೈಲಟ್‌ , ತುರ್ತಾಗಿ ರೈಲನ್ನು ನಿಲ್ಲಿಸಿ (Emergency Stop) ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

ಸೋಮವಾರ ಬೆಳಗ್ಗೆ 9:55ರ ವೇಳೆಗೆ ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಘಟನೆ ನಡೆದಿದ್ದು,ಈ ವೇಳೆ ಹಳಿಯ ಮೇಲೆ ಕೆಲವು ಕಲ್ಲುಗಳನ್ನಿಟ್ಟಿರುವುದನ್ನುಗಮನಿಸಿದ ಪೈಲಟ್‌, ತಕ್ಷಣವೇ ರೈಲನ್ನು ನಿಲ್ಲಿಸಿ ದೊಡ್ಡ ಅಪಘಾತವನ್ನು ತಪ್ಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಹಾಗೂ ಜಿಲ್ಲಾ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!