ರಷ್ಯಾ ಸೇನೆಯ ಕ್ಷಿಪಣಿ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ಉಕ್ರೇನ್ ಅಧ್ಯಕ್ಷ, ಗ್ರೀಕ್ ಪ್ರಧಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ-ಉಕ್ರೇನ್ ನಡುವಿನ ಯುದ್ಧ ಇನ್ನೂ ಮುಂದುವರಿದಿದ್ದು, ಇತ್ತ ರಷ್ಯಾ ಸೇನೆಯ ಕ್ಷಿಪಣಿ ದಾಳಿಯಿಂದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಕಪ್ಪು ಸಮುದ್ರದ ಬಂದರು ನಗರವಾದ ಒಡೆಸಾಗೆ ಭೇಟಿ ನೀಡುತ್ತಿದ್ದ ವೇಳೆ ರಷ್ಯಾದ ಕ್ಷಿಪಣಿ ದಾಳಿ ಮಾಡಿದೆ ಎಂದು ಸಿಎನ್‌ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ. ರಷ್ಯಾದ ಕ್ಷಿಪಣಿ ಉಭಯ ನಾಯಕರು ಇದ್ದ ಸ್ಥಳದಿಂದ ಕೇವಲ 500 ಮೀಟರ್ ದೂರದಲ್ಲಿ ಸ್ಫೋಟಿಸಿದೆ. ಸ್ಫೋಟದ ಬಳಿಕ ದಟ್ಟಹೊಗೆ ಆವರಿಸಿದ್ದು, ಇದು “ಮಶ್ರೂಮ್ ಮೋಡ” ಕ್ಕೆ ಸಾಕ್ಷಿಯಾಯಿತು ಮತ್ತು ಈ ಕ್ಷಿಪಣಿ ದಾಳಿಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ .

ಇದೇ ವಿಚಾರವಾಗಿ ಮಾಹಿತಿ ನೀಡಿರುವ ಉಕ್ರೇನಿಯನ್ ನೌಕಾಪಡೆಯ ವಕ್ತಾರರಾದ ಡಿಮಿಟ್ರೋ ಪ್ಲೆಟೆನ್‌ಚುಕ್ ಅವರು, ಕ್ಷಿಪಣಿ ದಾಳಿ ಮತ್ತು ಆ ಬಳಿಕ ನಡೆದ ಸ್ಫೋಟದಲ್ಲಿ ಐದು ಮಂದಿ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಸಿಎನ್‌ಎನ್ ಪ್ರಕಾರ, ಕ್ಷಿಪಣಿ ಸ್ಫೋಟದ ಸಾಮೀಪ್ಯದ ಹೊರತಾಗಿಯೂ ಜೆಲೆನ್ಸ್ಕಿ ಮತ್ತು ಮಿಟ್ಸೊಟಾಕಿಸ್ ಇಬ್ಬರೂ ಹಾನಿಗೊಳಗಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ .

ಇನ್ನು ಕ್ಷಿಪಣಿ ದಾಳಿ ವಿಚಾರದ ಬೆನ್ನಲ್ಲೇ ರಷ್ಯಾ ವಿರುದ್ಧ ಕಿಡಿಕಾರಿರುವ ಝೆಲೆನ್ಸ್ಕಿ, “ಇದು ನಮ್ಮ ದಿನನಿತ್ಯದ ಪರಿಸ್ಥಿತಿ. ನಾವು ಯಾರೊಂದಿಗೆ ವ್ಯವಹರಿಸುತ್ತಿದ್ದೇವೆಂದು ನೀವು ನೋಡಬಹುದು; ಅವರು ಎಲ್ಲಿ ಹೊಡೆಯುತ್ತಾರೋ ಎಂದು ನಾವು ಹೆದರುವುದಿಲ್ಲ. ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!