ಅನುಚಿತ ವರ್ತನೆ ಸಹಿಸಲಾಗೋದಿಲ್ಲ, ಪೊಲೀಸರ ವಿರುದ್ಧ ಮುಗಿಬಿದ್ದ ಶಾಸಕ ಮಂಜು

ಹೊಸದಿಗಂತ ವರದಿ ಅರಕಲಗೂಡು: 

ಅರಕಲಗೂಡು ತಾಲೂಕಿನಲ್ಲಿ ಕೆಲ ಪೊಲೀಸರ ವರ್ತನೆ ಮಿತಿ ಮೀರಿದೆ. ಪೊಲೀಸರು ಎಚ್ಚೆತ್ತು ಸರಿಪಡಿಸಿಕೊಳ್ಳದಿದ್ದರೆ ಸಾರ್ವಜನಿಕರೊಂದಿಗೆ ತಾವೂ ಕೈಜೋಡಿಸುವುದು ಅನಿವಾರ್ಯ ವಾಗುತ್ತದೆ ಎಂದು ಶಾಸಕ ಎ.ಮಂಜು ಎರಡನೇ ಬಾರಿಗೆ ಎಚ್ಚರಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಲ ಪೊಲೀಸರ ವರ್ತನೆ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ.ತಪ್ಪು ಮಾಡಿದವರ ವಿರುದ್ದ ಕಾನೂನು ಕ್ರಮಕ್ಕೆ ನನ್ನ ಅಭ್ಯಂತರವಿಲ್ಲ.ಆದರೆ ಅನಗತ್ಯವಾಗಿ ಅನುಚಿತವಾಗಿ ವರ್ತಿಸಿದರೆ ಸಹಿಸಲಾಗುವುದಿಲ್ಲ ಎಂದು ಅಸಮಾಧಾನ ‌ಹೊರಹಾಕಿದರು.

ನವೆಂಬರ್ 12ರ ರಾತ್ರಿ ಅನಕೃ ವೃತ್ತದಲ್ಲಿ ಬಸ್ ಗಾಗಿ ಕಾದು ನಿಂತಿದ್ದ ಇಬ್ಬರು ಯುವಕರನ್ನು ಪ್ರಶ್ನಿಸಿ,ಈ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ಪೊಲೀಸ್ ಪೇದೆಯೊಬ್ಬರು ಸದರಿ ಯುವಕರ ಮೇಲೆ ಹಲ್ಲೆ ನಡೆಸಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದ್ದು ವೈರಲ್ ಆಗಿದೆ.

ಕಳೆದ ವಾರವಷ್ಟೇ ಶಾಸಕ ಎ.ಮಂಜು ಅವರು ಪೊಲೀಸರ ಅನುಚಿತ ವರ್ತನೆ ಹಾಗೂ ಸಾರ್ವಜನಿಕರನ್ನು ಅನುಚಿತವಾಗಿ ಮಾತನಾಡಿಸುವುದನ್ನು ಸಾರ್ವಜನಿಕವಾಗಿಯೇ ಖಂಡಿಸಿದ್ದರು. ಪೊಲೀಸರ ಈ ವರ್ತನೆ ತಮ್ಮ ಕ್ಷೇತ್ರದಲ್ಲಿ ನಡೆಯುವುದಿಲ್ಲ. ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡುವುದನ್ನು ನಿಲ್ಲಿಸಿ,ತಪ್ಪಿತಸ್ಥರೆಂದು ಸಾಬೀತುಪಟ್ಟರೆ ಅಂತಹವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಿ. ಇದರಲ್ಲಿ ನಾನು ಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿ,ಕೂಡಲೇ ಪೊಲೀಸರು ತಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳಬೇಕು ಎಂದು ಎಚ್ಚರಿಸಿದರು.

ಶೀಘ್ರದಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಈ ಕುರಿತು ಮಾತನಾಡುವುದಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!