ಪತ್ನಿಗೆ ಸೀಟು ಕೊಡದ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿದ ಶಾಸಕ ಭರತ್‌ ಚಂದ್ರ ನಾರಾ !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಸ್ಸಾಂನ ಲಖಿಂಪುರ ಜಿಲ್ಲೆಯ ನೌಬೋಯಿಜಾನ ಕಾಂಗ್ರೆಸ್‌ ಶಾಸಕರೊಬ್ಬರು ತಮ್ಮ ಪತ್ನಿಗೆ ಟಿಕೆಟ್‌ ಕೊಡದ ಹಿನ್ನೆಲೆ ಪಕ್ಷಕ್ಕೇ ಗುಡ್‌ ಬೈ ಹೇಳಿದ್ದಾರೆ.

ಶಾಸಕ ಭರತ್‌ ಚಂದ್ರ ನಾರಾ ತನ್ನ ಪತ್ನಿ ರಾಣಿ ನಾರಾಗೆ ಕಾಂಗ್ರೆಸ್‌ ಪಕ್ಷ ಲೋಕಸಭಾ ಚುನಾವಣೆಗೆ ಸೀಟು ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಸಿಟ್ಟಿನಲ್ಲಿ ರಾಜೀನಾಮೆ ನೀಡಿದ್ದಾರೆ. ರಾಣಿ ನಾರಾ ಮಾಜಿ ಕೇಂದ್ರ ಸಚಿವೆಯಾಗಿದ್ದು, ಪತಿ ಭರತ್​ ಚಂದ್ರ ನಾರಾ ಈ ಬಾರಿ ಅವರಿಗೆ ಸೀಟು ಸಿಗಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು.

ಆದರೆ ಸೀಟು ವಂಚಿತರಾದ ಬಳಿಕ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಅದರಲ್ಲಿ ‘ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ಗೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!