ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿ ಮನೆಗೆ ಶಾಸಕ ದತ್ತಾತ್ರೇಯ ಪಾಟೀಲ್ ಭೇಟಿ

ದಿಗಂತ ವರದಿ ಕಲಬುರಗಿ:

ಉಕ್ರೇನ್,ನ ಖಾಕೀ೯ವ್,ನಲ್ಲಿ ಸಿಲುಕಿರುವ ಕಲಬುರಗಿ ವಿದ್ಯಾರ್ಥಿಯಾದ ಮಲ್ಲಿನಾಥ ಜಾಮಗೊಂಡ ಅವರ ಮನೆಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಗುರುವಾರ ಭೇಟಿ ನೀಡಿದರು. ಕಲಬುರಗಿ ನಗರದ ಭಾಗ್ಯವಂತಿ ನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ, ಎಂಬಿಬಿಎಸ್ ವಿದ್ಯಾರ್ಥಿಯಾದ ಮಲ್ಲಿನಾಥ ಜಾಮಗೊಂಡ ಅವರ ಪೋಷಕರಾದ ಅರವಿಂದ ಜಾಮಗೊಂಡ ಅವರಿಗೆ ಧೈರ್ಯ ತುಂಬಿದರು.

ಈಗಾಗಲೇ ಉಕ್ರೇನ್ ನಿಂದ ಭಾರತೀಯರನ್ನು ಕರೆತರುವ ಎಲ್ಲಾ ಕೆಲಸಗಳು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ ಎಂದು ಆತಂಕಕ್ಕೆ ಒಳಗಾದ ವಿದ್ಯಾರ್ಥಿ ಯ ತಂದೆ ಅರವಿಂದ ಜಾಮಗೊಂಡ ಅವರಿಗೆ ಮನವರಿಕೆ ಮಾಡಿದರು.

ಸುರಕ್ಷಿತವಾಗಿ ನಿಮ್ಮ ಮಗನನ್ನು ಕರೆ ತರುವ ನಿಟ್ಟಿನಲ್ಲಿ ಈಗಾಗಲೇ ಕಾಯ೯ ನಡೆಯುತ್ತಿದ್ದು, ಇದರ ಕುರಿತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರೊಂದಿಗೆ ಚಚೆ೯ ಮಾಡುತ್ತೇನೆ ಎಂದು ಧೈರ್ಯ ತುಂಬಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!