ದಿಗಂತ ವರದಿ ಹುಬ್ಬಳ್ಳಿ:
ಉತ್ತರ ಕರ್ನಾಟಕದ ಮಕ್ಕಳಲ್ಲಿ ಪ್ರತಿಭೆ ಇದ್ದು, ಆತ್ಮವಿಶ್ವಾಸ ಕೊರತೆಯಿದೆ. ಪ್ರತಿಯೊಬ್ಬರೂ ಆತ್ಮವಿಶ್ವಸದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಇಡೀ ವಿಶ್ವವನ್ನೇ ಗೆಲ್ಲುತ್ತಿರಿ ಎಂದು ಜಿಲ್ಲಾಧಿಕಾರಿ ನಿತೀಶ ಪಾಟೀಲ ಹೇಳಿದರು.
ವಿದ್ಯಾನಗರದ ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್ ಕಾಲೇಜಿನ ಏರ್ಪಡಿಸಲಾಗಿದ್ದ ಐಎಸ್ ಟಿಇ ಸ್ಟುಡೇಂಟ್ ಚಾಪ್ಟರ್ ಸುತ್ರಾ 2k22 ವಿಜ್ಞಾನ,ತಂತ್ರಜ್ಞಾನ ಪ್ರದರ್ಶನ ಮತ್ತು ಚಿತ್ತಾರ ಆಟ್೯ ಫೆಸ್ಟ್ ಎಂಬ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ಬೆಳೆಯುತ್ತದೆ. ಕೇವಲ ಓದಿನಿಂದ ಏನು ಸಾಧಿಸಲು ಸಾಧ್ಯವಿಲ್ಲ. ಪ್ರಾಯೋಗಿಕವಾಗಿ ಅರ್ಥಮಾಡಿಕೊಂಡು ನಡೆದಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಪ್ರಸ್ತುತವಾಗಿ ತಂತ್ರಜ್ಞಾನ ಮತ್ತು ವಿಜ್ಞಾನ ಮುಂದುವರೆದಿದ್ದು, ವಿದ್ಯಾರ್ಥಿಗಳು ಹೆಚ್ಚು ಇದಕ್ಕೆ ಮಹತ್ವ ನೀಡಬೇಕು. ಅಂದು ಕೊಂಡಿದನ್ನು ಸಾಧಿಸಬೇಕಾದರೆ ನಿರಂತರ ಪರಿಶ್ರಮ ಅವಶ್ಯಕ. ಮಾಡುವ ಪ್ರತಿಯೊಂದು ಕಾರ್ಯವನ್ನು ಶ್ರದ್ಧಾ ಭಕ್ತಿಯಿಂದ ಮಾಡಿ ಇದರಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ತಿಳಿಸಿದರು.
ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇರುತ್ತದೆ. ಆದರೆ ಅದಕ್ಕೆ ಸರಿಯಾಗಿ ಪ್ರೋತ್ಸಾಹ ಸಹಕಾರ ನೀಡುವುದು ಮುಖ್ಯ. ತಂದೆ-ತಾಯಿ ಮತ್ತು ಗುರುಗಳು ಮಕ್ಕಳಲ್ಲಿರುವಂತಹ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕು ಎಂದರು.
ಸ್ಪರ್ಧೆಗಳಲ್ಲಿ ಅತೀ ಹೆಚ್ಚು ಭಾಗವಹಿಸಿ. ಪ್ರಾಮಾಣಿಕ ಪ್ರಯತ್ನ ಯಾವತ್ತು ನಿಲ್ಲಿಸಬಾರದು ಅಂದಾಗ ಮಾತ್ರ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರದ ೨೦ ಶಾಲೆಯ ೪೫ ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಯೋಗದ ಸ್ಪರ್ಧೆಯಲ್ಲಿ ಮತ್ತು ೬೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ,ಕಾಲೇಜಿ ಪ್ರಾಚಾರ್ಯ ವೀರೇಶ ಅಂಗಡಿ, ಚಿಕ್ಕೋಡಿಯ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ಪ್ರಸಾದ ರಾಮಪುರೆ, ಪಿ.ಸಿ. ಜಾಬಿನ್ ಕಾಲೇಜನ ಪ್ರೊ. ರುದ್ರಯ್ಯ ಮುದೆನೂರಮಠ, ಮಂಜುನಾಥ ಜಾನಣ್ಣವರ, ವಿಜಯ ಲಕ್ಷ್ಮೀ ವಿಭೂತಿ ಇದ್ದರು.