BIG BOSS | ಬಿಗ್‌ಬಾಸ್ ಮನೆಗೆ ಶಾಸಕ ಪ್ರದೀಪ್ ಈಶ್ವರ್ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆಯಷ್ಟೇ ಬಿಗ್‌ಬಾಸ್ ಮನೆಯ ಗ್ರ್ಯಾಂಡ್ ಪ್ರಿಮಿಯರ್ ಲಾಂಚ್ ಆಗಿದ್ದು, ಈಗಾಗಲೇ 11 ಸ್ಪರ್ಧಿಗಳು ಮನೆ ಸೇರಿದ್ದಾರೆ.

ಇದೀಗ ಮನೆಗೆ ಹೊಸ ಸದಸ್ಯನ ಎಂಟ್ರಿಯಾಗಿದ್ದು, ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಒಂದು ದಿನ ತಡವಾಗಿ ಪ್ರದೀಪ್ ಈಶ್ವರ್ ಮನೆಗೆ ಎಂಟ್ರಿ ನೀಡಿದ್ದು, ಈ ಬಗ್ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲವರಂತೂ ಈಶ್ವರ್ ಅವರು ಕೆಲ ದಿನಗಳ ಕಾಲ ಗೆಸ್ಟ್ ಆಗಿ ಬಂದಿರುವ ಸಾಧ್ಯತೆಯೂ ಇದೆ ಎನ್ನುತ್ತಿದ್ದಾರೆ. ಸಭೆ ಸಮಾರಂಭಗಳಲ್ಲಿ ಡೈಲಾಗ್‌ಗಳ ಮೂಲಕ ಮನೆ ಮಾತಾಗಿದ್ದ ಪ್ರದೀಪ್ ಈಶ್ವರ್ ಅವರು ಬಿಗ್‌ಬಾಸ್ ಮನೆಯಲ್ಲಿ ಯಶಸ್ಸು ಕಾಣ್ತಾರಾ? ಕಾದುನೋಡಬೇಕಿದೆ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!