ಹೊಸದಿಗಂತ ವರದಿ, ರಾಣೆಬೆನ್ನೂರ
ಮಾಜಿ ಸಚಿವ ಮತ್ತು ವಿಧಾನ ಪರಿಷತ್ ಸದಸ್ಯ ಆರ್.ಶಂಕರ ಅವರ ರಾಣೇಬೆನ್ನೂರ ಮನೆ ಹಾಗೂ ಕಚೇರಿ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಮತ್ತು ಉಪವಿಭಾಗಾಧಿಕಾರಿಗಳ ನೇತೃತ್ವದ ತಂಡ ಮಂಗಳವಾರ ರಾತ್ರಿ ೧೨ ಗಂಟೆಗೆ ಸಮಯಕ್ಕೆ ದಾಳಿ ನಡೆಸಿದೆ.
ಚುನಾವಣೆಗೂ ಪೂರ್ವದಲ್ಲಿ ಉಡುಗರೆಗಳನ್ನು ನೀಡುತ್ತಿರುವುದು ಹೆಚ್ಚಿನ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. ಇಂತಹ ಮಾತುಗಳು ವಿಪ ಸಸ್ಯ ಆರ್.ಶಂಕರ ಅವರು ಕ್ಷೇತ್ರದ ಕೆಲ ಮತದಾರರಿಗೆ ಉಡುಗರೆಗಳನ್ನು (ಕುಕ್ಕರ್, ಸೀರೆ, ತಟ್ಟೆ, ಲೋಟ) ಮತದಾರರ ಪಟ್ಟಿ ಹಿಡಿದು ಹಂಚುತ್ತಿದ್ದರುವ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಈ ದಾಳಿ ಜರುಗಿದೆ ಎಂದು ಹೇಳಲಾಗುತ್ತಿದೆ.
ದಾಳಿ ವೇಳೆ ಅವರ ಕಚೇರಿಯಲ್ಲಿ ಕೋಟ್ಯಂತರ ರೂ. ಬೆಳೆಬಾಳುವ ಆರ್.ಶಂಕರ ಭಾವಚಿತ್ರ ಇರುವ ಸೀರೆ, ಸ್ಕೂಲ್ ಬ್ಯಾಗ್, ತಟ್ಟೆ, ಲೋಟ ದೊರೆತಿದ್ದು, ಅಧಿಕಾರಿಗಳು ಅವುಗಳನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ ಅವರ ಮೇಲೆ ಪ್ರಕರಣ ದಾಖಲಿಸುವ ಕುರಿತು ನ್ಯಾಯಾಲಯದ ಅನುಮತಿ ಕೋರಿದ್ದಾರೆ. ನ್ಯಾಯಾಲಯದಿಂದ ಸೂಚನೆ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಉಪ ವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರಡ್ಡಿ ಹಾಗೂ ಕಂದಾಯ ನಿರೀಕ್ಷಕ ಅಶೋಕ ಅರಳೇಶ್ವರ ಮತ್ತು ತಂಡದವರು ದಾಳಿಯಲ್ಲಿದ್ದರು.