ಮೂಡುಬಿದಿರೆಯಲ್ಲಿ ಹಬ್ಬದ ಕಳೆ ಹೆಚ್ಚಿಸಿದ ಶಾಸಕರು, ಮಠಾಧೀಶರು, ಫಸ್ಟ್ ವೋಟರ್‍ಸ್!

ಹೊಸದಿಗಂತ ಮೂಡುಬಿದಿರೆ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನ ಇನ್ನಷ್ಟು ಬಿರುಸುಗೊಳ್ಳುತ್ತಿದ್ದು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಉತ್ಸಾಹದಿಂದಲೇ ಮತಗಟ್ಟೆಯತ್ತ ಹೆಜ್ಜೆಹಾಕಿ ಮತದಾನದ ಕಳೆ ಹೆಚ್ಚಿಸುತ್ತಿದ್ದಾರೆ.

ಶಾಸಕ ಉಮಾನಾಥ ಕೋಟ್ಯಾನ್ ಅವರು ಮೂಡುಬಿದಿರೆ ಬಿಇಒ ಕಚೇರಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ ಮೂಡಬಿದ್ರೆ ಜೈನ ಮಠದ ಭಟ್ಟಾರಕ ಸ್ವಾಮೀಜಿ ಅವರು ಡಿಜೆ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಕಲ್ಲಬೆಟ್ಟು, ಶಿರ್ತಾಡಿ, ಧರೆಗುಡ್ಡೆ ಮಂದಗತಿಯಲ್ಲಿ ಮತದಾನ ಸಾಗುತ್ತಿದ್ದು, ಮೂಡಬಿದ್ರೆಯ ಜ್ಯೋತಿ ನಗರ ಶಾಲೆಯಲ್ಲಿ ಮತಪಟ್ಟಿಯಲ್ಲಿ ಹೆಸರು, ಕ್ರಮ ಸಂಖ್ಯೆ ಅಸ್ಪಷ್ಟವಾಗಿ ಕೆಲಕಾಲ ಗೊಂದಲಕ್ಕೆ ಕಾರಣವಾಗಿ ಕೊರಗಪ್ಪ ಎಂಬವರು ಹಾಗೂ ಕರ್ತವ್ಯ ನಿರತ ಪೊಲೀಸ್ ಮಧ್ಯೆ ಮಾತಿನ ಚಕಮಕಿ ಕೂಡಾ ನಡೆದಿದೆ. ಈ ನಡುವೆ ಹೆಚ್ಚಿನ ಬೂತ್‌ಗಳಲ್ಲಿ ಪ್ರಥಮ ಬಾರಿಗೆ ಮತ ಚಲಾಯಿಸಿದವರ ಉತ್ಸಾಹವೂ ಕಂಡುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!