Monday, December 11, 2023

Latest Posts

ʻವಂಚನೆ ಮಾಡೋದು ಕಾಂಗ್ರೆಸ್‌ನ ಸ್ವಭಾವ, ಇವರಿಗೆ ವೋಟ್‌ ಹಾಕಿದ್ರೆ ಕರ್ನಾಟಕದ ಗತಿ ಬರುತ್ತೆʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಂಚನೆ ಮಾಡೋದು ಕಾಂಗ್ರೆಸ್‌ನ ಸ್ವಭಾವ, ಇವರಿಗೆ ವೋಟ್‌ ಹಾಕಿದ್ರೆ ಕರ್ನಾಟಕದ ಗತಿಯೇ ಇಲ್ಲಿಗೂ ಬರುತ್ತೆ ಎಂದು ಬಿಆರ್‌ಎಸ್‌ ಎಂಎಲ್‌ಸಿ ಕವಿತಾ ಟೀಕೆ ಮಾಡಿದ್ದಾರೆ. ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಮಾತಿನ ಜಟಾಪಟಿ ಕೂಡ ತೀವ್ರವಾಗಿದೆ.

ಈ ಬೆನ್ನಲ್ಲೇ ಬಿಆರ್‌ಎಸ್ ಎಂಎಲ್ಸಿ ಕವಿತಾ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದು, ಇದೊಂದು ವಂಚನೆ ಪಕ್ಷ ಎಂದು ಕರೆದಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು..ʻವಂಚನೆ ಮಾಡುವುದು ಕಾಂಗ್ರೆಸ್ ಸ್ವಭಾವ.. ಕಾಂಗ್ರೆಸ್ ಮತ ಹಾಕಿದರೆ ಕರ್ನಾಟಕಕ್ಕೆ ಆದ ಗತಿ ಆಗುತ್ತದೆ..ಕಾಂಗ್ರೆಸ್‌ ಬಂದ್ರೆ ಕರೆಂಟ್‌ ಗೋಳು ತಪ್ಪಿದ್ದಲ್ಲʼ ಎಂದು ಟೀಕಿಸಿದ್ದಾರೆ.

ಟ್ವೀಟ್‌ನಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್‌ ವಿಡಿಯೋವನ್ನು ಹಂಚಿಕೊಂಡಿರುವ ಕವಿತಾ..ಕರ್ನಾಟಕ ಚುನಾವಣೆ ವೇಳೆ 20 ಗಂಟೆ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಪಕ್ಷ ಹೇಳಿತ್ತು. ಇದೀಗ ರೈತರಿಗೆ ಐದು ಗಂಟೆ ಕರೆಂಟ್ ಕೊಡಲು ಸರಕಾರ ಹೇಳಿದೆ ಅಂತಾರೆ. ಇಂತವರಿಗೇನಾದರೂ ಮತ ಹಾಕಿದರೆ ಅಲ್ಲಿನ ಗತಿಯೇ ಇಲ್ಲಿಯೂ(ತೆಲಂಗಾಣ) ಬರುತ್ತದೆ ಎಂದರು. ಅಷ್ಟಕ್ಕೆ ಸುಮ್ಮನಾಗದೆ ಕವಿತಾ  ಕರ್ನಾಟಕದ ಸಚಿವರಂತೆ ಇಲ್ಲಿನ ತೆಲಂಗಾಣ ಪಿಸಿಸಿ ಅಧ್ಯಕ್ಷರೂ ಮೂರು ಗಂಟೆ ಕರೆಂಟು ಸಾಕು, 24 ಗಂಟೆ ವಿದ್ಯುತ್ ಅನಗತ್ಯ ಎಂದು ಹೇಳಿದ್ದಾರೆ. ವಿದ್ಯುತ್ ಸಮಸ್ಯೆ ತರುವ ಕಾಂಗ್ರೆಸ್ ನಮಗೇಕೆ? ಇಂತವರಿಗೆಲ್ಲಾ ಯಾಕೆ ಅಧಿಕಾರ ಕೊಡುತ್ತೀರ ಎಂದು ಪ್ರಶ್ನಿಸಿದರು.

ದೇಶದಲ್ಲಿ 24 ಗಂಟೆ ಉಚಿತ ವಿದ್ಯುತ್ ನೀಡುತ್ತಿರುವ ಏಕೈಕ ಮುಖ್ಯಮಂತ್ರಿ ಕೆಸಿಆರ್ ಅವರನ್ನು ಬೆಂಬಲಿಸುವಂತೆ ಕವಿತಾ ಮನವಿ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!