Tuesday, March 21, 2023

Latest Posts

ದೆಹಲಿ ಮದ್ಯ ಹಗರಣ: ಇಂದು ವಿಚಾರಣೆಗೆ ಹಾಜರಾಗುತ್ತಾರಾ ಕವಿತಾ..ಇಡಿಗೆ ಬರೆದ ಪತ್ರದಲ್ಲೇನಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಬಿಆರ್‌ಎಸ್ ಎಂಎಲ್‌ಸಿ ಕವಿತಾ ಅವರಿಗೆ ಇಡಿ ನೋಟಿಸ್ ಜಾರಿ ಮಾಡಿದ್ದು, ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಈ ಸಂಬಂಧ ಮಾ.9ರಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಇಡಿಗೆ ಎಂಎಲ್‌ಸಿ ಕವಿತಾ ಪತ್ರ ಬರೆದಿದ್ದಾರೆ. ಪೂರ್ವ ಕಾರ್ಯಕ್ರಮಗಳ ಕಾರಣ ಮಾರ್ಚ್ 9 ರಂದು ವಿಚಾರಣೆಗೆ ಬರಲು ಆಗುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇಷ್ಟು ತರಾತುರಿ ವಿಚಾರಣೆಗೆ ಕವಿತಾ ಇಡಿಯನ್ನೂ ಪ್ರಶ್ನಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಿಸಲು ಅವಕಾಶವಿದ್ದರೂ ನೇರವಾಗಿ ಇಡಿ ಕಚೇರಿಗೆ ಬಂದು ಏನು ಪ್ರಯೋಜನ ಎಂದಿದ್ದಾರೆ. ತನಿಖೆ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಇದೆಲ್ಲವೂ ರಾಜಕೀಯ ಪಕ್ಷದ ಭಾಗವಾಗಿ ನಡೆಯುತ್ತಿದೆ ಎಂದು ದೂರಿದರು.

ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಮಾರ್ಚ್ 10 ರಂದು ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ. ಹಾಗಾಗಿ ಮಾರ್ಚ್ 11 ರಂದು ವಿಚಾರಣೆಗೆ ಹಾಜರಾಗುವುದಾಗಿ ಕವಿತಾ ಪತ್ರದಲ್ಲಿ ತಿಳಿಸಿದ್ದಾರೆ.

ದೆಹಲಿ ಮದ್ಯ ಹಗರಣದಲ್ಲಿ BRS MLC ಕವಿತಾ ಅವರಿಗೆ ED ಬುಧವಾರ (ಮಾರ್ಚ್ 8, 2023) ನೋಟಿಸ್ ನೀಡಿದೆ. ಗುರುವಾರ (ಮಾರ್ಚ್ 9, 2023) ಇಡಿ ಮುಂದೆ ಹಾಜರಾಗುವಂತೆ ಆದೇಶಿಸಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಮದ್ಯದ ವ್ಯಾಪಾರಿ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ಇಡಿ ತನಿಖೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ರಾಮಚಂದ್ರ ಪಿಳ್ಳೆ ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದರು. ತಾನು ಎಂಎಲ್‌ಸಿ ಕವಿತಾ ಅವರ ಬೇನಾಮಿಯಾಗಿದ್ದು, ಅವರ ಆದೇಶದಂತೆ ನಡೆದುಕೊಂಡಿದ್ದೇನೆ ಎಂದು ಇಡಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕವಿತಾ ವಿರುದ್ಧ ತನಿಖೆ ನಡೆಸಲು ಇಡಿ ನಿರ್ಧರಿಸಿದೆ.

ಈ ಪ್ರಕರಣದಲ್ಲಿ ಮೊದಲು ಕವಿತಾ ಅವರನ್ನು ಹೈದರಾಬಾದ್‌ನಲ್ಲಿರುವ ಅವರ ನಿವಾಸದಲ್ಲಿ ಇಡಿ ವಿಚಾರಣೆ ನಡೆಸಿತ್ತು. ದೆಹಲಿ ಮದ್ಯ ಹಗರಣದಲ್ಲಿ ಕವಿತಾ ಪಾತ್ರ, ಕೊಡುಗೆ ವಿಚಾರ ಮುಂತಾದ ವಿಷಯಗಳ ಕುರಿತು ಕವಿತಾ ಅವರನ್ನು ಪ್ರಶ್ನಿಸುವ ಸಾಧ್ಯತೆ ಇದೆ. ಈ ಹಿಂದೆ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ರಾಮಚಂದ್ರ ಪಿಳ್ಳೈ ಪಾತ್ರವನ್ನು ಇಡಿ ಉಲ್ಲೇಖಿಸಿದೆ.

ಪಿಳ್ಳೈ ವಿರುದ್ಧ ಹಲವು ಆರೋಪಗಳನ್ನು ದಾಖಲಿಸಲಾಗಿದೆ. ಕವಿತಾ ಪರವಾಗಿ ಎಲ್ಲಾ ವ್ಯವಹಾರಗಳನ್ನು ನೋಡಿಕೊಂಡಿದ್ದರು ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಹೇಳಿಕೊಂಡಿದೆ. ಪ್ರಕರಣದ ಇನ್ನೋರ್ವ ಆರೋಪಿ ಸಮೀರ್ ಮಹೇಂದ್ರು ವಿರುದ್ಧ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಕವಿತಾ ಹೆಸರನ್ನೂ ಇಡಿ ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರ (ಮಾರ್ಚ್ 9, 2023) ನಡೆಯಲಿರುವ ತನಿಖೆ ನಿರ್ಣಾಯಕವಾಗಲಿದೆ. ಮಾರ್ಚ್ 9 ರಂದು ನಡೆಯುವ ವಿಚಾರಣೆಗೆ ಕವಿತಾ ಹಾಜರಾಗುತ್ತಾರಾ? ಅಥವಾ ಮಾರ್ಚ್ 11 ರಂದು ಹಾಜರಾಗುತ್ತಾರಾ? ಕಾದುನೋಡಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!