Tuesday, March 28, 2023

Latest Posts

ಇಂದು ಭಾರತ v/s ಆಸ್ಟ್ರೇಲಿಯಾ 4ನೇ ಟೆಸ್ಟ್‌: ಪಂದ್ಯ ವೀಕ್ಷಿಸಲಿರುವ ಮೋದಿ, ಆಂಥೋನಿ ಅಲ್ಬನೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಅಂತಿಮ ಟೆಸ್ಟ್ ಪಂದ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ವೀಕ್ಷಿಸಲಿದ್ದಾರೆ.

ಭಾರತ ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಇಂದಿನಿಂದ (ಮಾರ್ಚ್ 9) ರಿಂದ ಆರಂಭವಾಗಲಿದ್ದು, ಮೊದಲನೇ ದಿನದಾಟವನ್ನು ನೋಡಲು ಪ್ರಧಾನಿ ಮೋದಿ ಜೊತೆಗೆ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮೈದಾನಕ್ಕೆ ಬರಲಿದ್ದಾರೆ.

ಇನ್ನೂ ಭಾರತಕ್ಕೆ ಇದು ನಿರ್ಣಾಯಕ ಪಂದ್ಯವಾಗಲಿದೆ. ಮೂರನೇ ಟೆಸ್ಟ್‌ ಪಂದ್ಯವನ್ನು ಸೋತ ಭಾರತ ಅಹಮದಾಬಾದ್‌ನಲ್ಲಿ ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿ ಬಂದು ನಿಂತಿದೆ. ವಿಶ್ವ ಟೆಸ್ಟ್‌ಚಾಂಪಿಯನ್‌ಶಿಪ್‌ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆದುಕೊಳ್ಳಬೇಕೆಂದರೆ ಭಾರತ ಈ ಪಂದ್ಯವನ್ನು ಗೆಲ್ಲಬೇಕು.

ಪ್ರತಿಷ್ಟಿತ ಪಂದ್ಯವನ್ನು ವೀಕ್ಷಿಸಲು ಬರುತ್ತಿರುವುದರಿಂದ ಸ್ಥಳ ಅತ್ಯಂತ ಬಿಗಿ ಭದ್ರತೆಯಿಂದ ಕೂಡಿದೆ. ಉಭಯ ದೇಶಗಳ ಪ್ರಧಾನಿಗಳು ಬೆಳಗ್ಗೆ 8.30ಕ್ಕೆ ಕ್ರೀಡಾಂಗಣ ತಲುಪಲಿದ್ದಾರೆ. ಒಂದೂವರೆ ಗಂಟೆಗಳ ಕಾಲ ಸ್ಟೇಡಿಯಂನಲ್ಲಿ ಉಳಿದುಕೊಂಡು ಆಟಗಾರರ ಜೊತೆ ವಿಶೇಷ ಸಭೆ ನಡೆಸಲಿದ್ದಾರಂತೆ. ಟಾಸ್ ವೇಳೆ ಇಬ್ಬರು ಪ್ರಧಾನಿಗಳು ಉಪಸ್ಥಿತರಿದ್ದು, ಪ್ರಧಾನಿ ನರೇಂದ್ರ ಮೋದಿ ಟಾಸ್ ಎಸೆಯಲಿದ್ದಾರೆ ಎಂದು ತಿಳಿಸಲಾಗಿದೆ. ಸ್ಟೇಡಿಯಂ ಭದ್ರತೆಯ ಹೊಣೆಯನ್ನು ಎಸ್‌ಪಿಜಿ ವಹಿಸಿಕೊಂಡಿದೆ. ಮೊದಲ ದಿನವೇ ಒಂದು ಲಕ್ಷ ಜನ ಪಂದ್ಯ ವೀಕ್ಷಿಸಲು ಬರುವ ನಿರೀಕ್ಷೆ ಇದೆ. ಈಗಾಗಲೇ ಕ್ರೀಡಾಂಗಣದಲ್ಲಿ 75 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!