ಮಸೀದಿಯಲ್ಲಿದ್ದವರ ಮೇಲೆ ಹಲ್ಲೆಗೈದ ದುಷ್ಕರ್ಮಿಗಳ ಗುಂಪು: ಎಫ್‌ಐಆರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮಸೀದಿಯೊಂದರ ಮೇಲೆ ದಾಳಿ ಮಾಡಿ, ನಮಾಜ್‌ ಮಾಡುತ್ತಿದ್ದವರ ಮೇಲೆ ಹಲ್ಲೆಗೈದಿರುವ ಘಟನೆ ಹರಿಯಾಣದ ಸೋನಿಪತ್‌ನ ಸ್ಯಾಂಡಲ್ ಕಲಾನ್ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಗ್ರಾಮದಲ್ಲಿ ಸಣ್ಣದಾಗಿ ನಿರ್ಮಾಣ ಮಾಡಿರುವ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ವೇಳೆ 15-20 ಜನರ ಗುಂಪೊಂದು ಲಾಠಿ ಹಿಡಿದುಕೊಂಡು ಮಸೀದಿ ಮೇಲೆ ದಾಳಿ ನಡೆಸಿದೆ. ಮಸೀದಿಯಲ್ಲಿನ ವಸ್ತುಗಳನ್ನು ಒಡೆದು ಹಾಕಿ ಹಾನಿ ಮಾಡಿದ್ದಾರೆ. ಇದಾದ ಬಳಿಕ ನಮಾಜ್‌ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ.

ಘಟನೆಯಲ್ಲಿ ಇಸ್ತಾಕ್ ಅಲಿ, ಅಲಾಮಿರ್, ಸಬೀರ್ ಅಲಿ, ಫರ್ಯಾದ್, ಅನ್ಸರ್ ಅಲಿ, ಜುಲೇಖಾ, ಅಲಿ ತಾಬ್, ನರ್ಗೀಸ್ ಮತ್ತು ಜರೀನಾ ಎಂಬುವರು ಸೇರಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಗೆ ಕಾರಣವೇನು ಎಂಬುದು ಇದುವರೆಗೆ ತಿಳಿದು ಬಂದಿಲ್ಲ. ಪೊಲೀಸರು 19 ಮಂದಿಯ ವಿರುದ್ಧ ಎಫ್‌ ಐಆರ್‌ ದಾಖಲಿಸಿದ್ದು, ಇಲ್ಲಿಯವರೆಗೆ 16 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!