ಮಂಗಳೂರಿನ ಮೆಡಿಕಲ್ ಕಾಲೇಜ್‌ ಲೇಡಿಸ್‌ ಹಾಸ್ಟೆಲ್‌ನ ಟಾಯ್ಲೆಟ್‌ನಲ್ಲಿ ಮೊಬೈಲ್‌! ಯುವಕ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಂಗಳೂರಿನ ಬಾವುಟಗುಡ್ಡೆಯಲ್ಲಿನ ಖಾಸಗಿ ಮೆಡಿಕಲ್‌ ಕಾಲೇಜಿನ ಲೇಡಿಸ್ ಟಾಯ್ಲೆಟ್​ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡಿದ್ದ ಅಪ್ರಾಪ್ತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮೇ‌ 6 ರಂದು ಮೆಡಿಕಲ್ ಕಾಲೇಜಿಗೆ ರೋಗಿಯಂತೆ ಬಂದಿದ್ದ ಅಪ್ರಾಪ್ತ ಬಳಿಕ ಲೇಡಿಸ್ ಟಾಯ್ಲೆಟ್​ಗೆ ಹೋಗಿ ಅಲ್ಲಿ ತನ್ನ ಮೊಬೈಲ್ ಇಟ್ಟಿದ್ದನು. ಆದರೆ ಮೊಬೈಲ್ ಒಳಗೆ ಇಟ್ಟಿದ್ದ ವೇಳೆಯೇ ಯಾವುದೋ ಫೋನ್ ಕಾಲ್ ಬಂದಿದ್ದರಿಂದ ಮೊಬೈಲ್ ರಿಂಗ್ ಆಗಿದೆ. ಈ ವೇಳೆ ಕಾಲೇಜಿನ ವಾಚ್​ಮೆನ್ ಪರಿಶೀಲನೆ ಮಾಡಿದಾಗ ಮೊಬೈಲ್ ಪತ್ತೆಯಾಗಿದೆ.

ನಂತರ ಪೊಲೀಸ್ ಠಾಣೆಗೆ ಕಾಲೇಜಿನ ವಾಚ್​ಮೆನ್ ದೂರು ನೀಡಿದ್ದನು. ಈ ದೂರಿನ ಆಧಾರದ ಮೇಲೆ ಕಾಲೇಜಿನ ಸಿಸಿಟಿವಿ ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. 17 ವರ್ಷದ ಅಪ್ರಾಪ್ತ ಕೃತ್ಯ ಎಸಗಿದ್ದು ಪೊಲೀಸರು ವಶಕ್ಕೆ ಪಡೆದುಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!