ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಪಂದ್ಯದ ವೇಳೆ ರಾಜಸ್ಥಾನ ರಾಯಲ್ಸ್ ಮ್ಯಾನೇಜರ್ ರೋಮಿ ಭಿಂದರ್ ಡಗೌಟ್‌ನಲ್ಲಿ ಫೋನ್ ಬಳಸಿದ್ದಕ್ಕೆ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ.
ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ವಿರುದ್ಧದ ಪಂದ್ಯದ ಸಮಯದಲ್ಲಿ ಡಗೌಟ್‌ನಲ್ಲಿ ಫೋನ್ ಬಳಸಿದ್ದಕ್ಕಾಗಿ ರೋಮಿ ಭಿಂದರ್ ಅವರಿಗೆ ಬಿಸಿಸಿಐ 1 ಲಕ್ಷ ರೂ. ದಂಡ ವಿಧಿಸಿದೆ. ಜೊತೆಗೆ ಮತ್ತೆ ಮರು ತಪ್ಪು ಮಾಡದಂತೆ ಎಚ್ಚರಿಕೆ ನೀಡಿದೆ. ಈ ಮೂಲಕ ಅವರನ್ನು ನಿಷೇಧದಿಂದ ಮುಕ್ತಗೊಳಿಸಲಾಗಿದೆ.
ಇತ್ತ ಭಿಂದರ್ ಪಕ್ಕ ಕುಳಿತು ಮೊಬೈಲ್ ನೋಡುತ್ತಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಶಿಕ್ಷೆಯಿಂದ ಪಾರಾಗಿದ್ದು, ದೊಡ್ಡ ರಿಲೀಫ್ ಸಿಕ್ಕಿದೆ.
ಐಪಿಎಲ್ ನಿಯಮದ ಪ್ರಕಾರ, ತಂಡದ ಆಟಗಾರರು ಹಾಗೂ ಸದಸ್ಯರಿಗೆ ಡಗೌಟ್‌ನಲ್ಲಿ ಮೊಬೈಲ್ಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಇತ್ತ ರೋಮಿ ಭಿಂದರ್ ಡಗೌಟ್‌ನಲ್ಲಿ ಫೋನ್ ಬಳಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಶೋ-ಕಾಸ್ ನೊಟೀಸ್ ನೀಡಿ, 48 ಗಂಟೆಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಹೇಳಿತ್ತು.
ಈ ಸಂಬಂಧ ಅವರ ಮೊದಲ ಉಲ್ಲಂಘನೆಯಾಗಿರುವುದರಿಂದ, 1 ಲಕ್ಷ ರೂ. ದಂಡ ವಿಧಿಸಿದೆ. ಭವಿಷ್ಯದಲ್ಲಿ ಹೆಚ್ಚು ಜಾಗರೂಕರಾಗಿರಲು ಎಚ್ಚರಿಸಲಾಗಿದೆ. ಆಟದ ಮೇಲೆ ಪರಿಣಾಮ ಬೀರದಂತೆ ಎಲ್ಲರೂ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಸೂಚಿಸಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.



