ಮೊಧೇರಾ ಭಾರತದ ಮೊದಲ ‘ಸೌರಶಕ್ತಿ ಚಾಲಿತ ಹಳ್ಳಿ’: ಪ್ರಧಾನಿ ಮೋದಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುಜರಾತ್‍ನ ಮೆಹ್ಸಾನಾ ಜಿಲ್ಲೆಯ ಮೊಧೇರಾ ಗ್ರಾಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊದಲ ’24*7 ಸೌರಶಕ್ತಿ ಚಾಲಿತ ಗ್ರಾಮ’ವೆಂದು ಘೋಷಿಸಿದ್ದಾರೆ. ಇದರೊಂದಿಗೆ ಪ್ರಧಾನಿ ಮೋದಿ ಗ್ರಾಮದಲ್ಲಿ 3900 ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು.

ಬಳಿಕ ಮಾತನಾಡಿದ ಅವರು, ನಾವು ವಿದ್ಯುತ್ತಿಗೆ ಪಾವತಿಸುವುದಿಲ್ಲ, ಆದರೆ ಅದನ್ನು ಮಾರಾಟ ಮಾಡಲು ಪ್ರಾರಂಭಿಸುತ್ತೇವೆ ಮತ್ತು ಅದರಿಂದ ಗಳಿಸುತ್ತೇವೆ. ಸ್ವಲ್ಪ ಸಮಯದ ಹಿಂದಿನವರೆಗೆ, ಸರ್ಕಾರವು ನಾಗರಿಕರಿಗೆ ವಿದ್ಯುತ್ ಪೂರೈಸುತ್ತಿತ್ತು, ಆದರೆ ಈಗ, ಸೌರ ಫಲಕಗಳ ಅಳವಡಿಕೆಯೊಂದಿಗೆ, ನಾಗರಿಕರು ತಮ್ಮದೇ ಆದ ವಿದ್ಯುತ್ತನ್ನು ಉತ್ಪಾದಿಸುತ್ತಾರೆ ಎಂದು ಹೇಳಿದರು.

ಭಾರತದಲ್ಲಿ ಮೊಧೆರಾ ಸೂರ್ಯ ದೇವಸ್ಥಾನಕ್ಕೆ ಪ್ರಸಿದ್ಧಿಯಾಗಿದೆ. ಇದೇ ಸೂರ್ಯ ಮಂದಿರದ ನಾಡು ಇದೀಗ ಸೌರಶಕ್ತಿ ಚಾಲಿತ ಗ್ರಾಮವಾಗಿದೆ ಎಂದು ಮೋದಿ ಹೇಳಿದ್ದಾರೆ.

ಮೊಧೇರಾ ಗ್ರಾಮದಲ್ಲಿ ನೆಲದ ಮೇಲಿಟ್ಟಿರುವ ಸೋಲಾರ್ ಪ್ಲಾಂಟ್, 1,300 ರೂಫ್ ಟಾಪ್ ಸೋಲಾರ್ ಸಿಸ್ಟಮ್, ಸರ್ಕಾರಿ ಕಚೇರ ಮೇಲೆ ಸೇರಿದಂತೆ ಬಹುತೇಕ ಕಟ್ಟಡಗಳ ಮೇಲೆ ಸೋಲಾರ್ ಸಿಸ್ಟಮ್ ಅಳವಡಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!