ಮದುವೆಯಾದ ನಾಲ್ಕೇ ತಿಂಗಳಲ್ಲಿ ಅವಳಿ ಮಕ್ಕಳಿಗೆ ತಾಯಿಯಾದ ನಟಿ ನಯನತಾರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೋಡಿ ಇದೀಗ ಸಿಹಿ ಸುದ್ದಿ ನೀಡಿದ್ದು,ಅವಳಿ ಮಕ್ಕಳಿಗೆ ತಂದೆ ಮತ್ತು ತಾಯಿ ಆಗಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ವಿಘ್ನೇಶ್ ಶಿವನ್, ಮಕ್ಕಳ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ‘ನಾವು ಆಗಿದ್ದೇವೆ. ನಮಗೆ ಅವಳಿ ಗಂಡು ಮಕ್ಕಳಾಗಿವೆ. ನಮ್ಮ ಎಲ್ಲಾ ಪ್ರಾರ್ಥನೆ, ನಮ್ಮ ಪೂರ್ವಜರ ಆಶೀರ್ವಾದ ಎಲ್ಲಾ ಒಳ್ಳೆಯ ಅಭಿವ್ಯಕ್ತಿಗಳ ಹಾರೈಕೆಯ ಫಲವಾಗಿ ನಮಗೆ ಈ ಮಕ್ಕಳಾಗಿವೆ. ನಿಮ್ಮೆಲ್ಲರ ಆಶೀರ್ವಾದ ನಮಗೆ ಬೇಕು ಎಂದಿದ್ದಾರೆ.

ಅವರು ಜೂನ್ 9, 2022 ರಂದು ವಿವಾಹವಾಗಿದ್ದರು. ನಯನತಾರಾ ಮತ್ತು ವಿಘ್ನೇಶ್ ಶಿವನ್ ಯುರೋಪ್ನಲ್ಲಿ ಸುದೀರ್ಘ ವಿರಾಮದಿಂದ ಹಿಂತಿರುಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!