ಮೇಷ
ಸಂಬಂಧದಲ್ಲಿ ಸಮಾಧಾನಕರ ಬೆಳವಣಿಗೆ. ಕ್ಲೇಶ ಕಳೆದು ನೆಮ್ಮದಿ ಮೂಡಲಿದೆ. ಇತರರ ಯಶಸ್ಸಿಗೆ ಅಸೂಯೆ ಪಡದಿರಿ. ಸ್ನೇಹಕ್ಕೆ ಕುಂದು.
ವೃಷಭ
ವೃತ್ತಿಯಲ್ಲಿ ಉಂಟಾಗಿದ್ದ ಸಮಸ್ಯೆ ಪರಿಹಾರ. ನಿಮ್ಮ ಸುತ್ತಲಿನ ವ್ಯಕ್ತಿಗಳಿಂದ ಅತಿಯಾದುದನ್ನು ನಿರೀಕ್ಷಿಸಬೇಡಿ. ಅವರಿಂದ ನಿರಾಶೆ ಉಂಟಾದೀತು.
ಮಿಥುನ
ಆರೋಗ್ಯದ ಕುರಿತು ಚಿಂತೆಗೆ ಒಳಗಾಗುವಿರಿ. ಅನವಶ್ಯ ಒತ್ತಡಕ್ಕೆ ಗುರಿಯಾಗದಿರಿ.ಅದರಿಂದ ಭಾವನಾತ್ಮಕ ಏರುಪೇರು. ವೃತ್ತಿಯಲ್ಲಿ ಸಮಸ್ಯೆ ಉಂಟಾದೀತು.
ಕಟಕ
ಗಡುವಿಗಿಂತ ಮೊದಲು ಕೆಲಸ ಮುಗಿಸಿ. ಇತರರ ಸಹಕಾರಕ್ಕೆ ಕಾಯದಿರಿ. ಹಣದ ವಿಚಾರಕ್ಕೆ ಸಂಬಂಧಿಸಿ ದುಡುಕಿನ ನಿರ್ಧಾರ ತಾಳಬೇಡಿ. ಕೌಟುಂಬಿಕ ವಾಗ್ವಾದ.
ಸಿಂಹ
ಮನೆಯಲ್ಲಿ ಹಿರಿಯರ ಜತೆ ವಾಗ್ವಾದಕ್ಕೆ ಇಳಿಯಬೇಡಿ. ಕೆಲಸದಲ್ಲಿ ಅಡ್ಡಿ ಎದುರಿಸುವಿರಿ. ಕೆಲವರ ಅಸಹಕಾರ. ಆರ್ಥಿಕ ಹೊರೆ ಅಧಿಕ.
ಕನ್ಯಾ
ವೃತ್ತಿಯಲ್ಲಿ ನಿಮ್ಮ ಸ್ಥಾನ ಉನ್ನತಗೊಳಿಸುವ ಅವಕಾಶ ಸಿಗಲಿದೆ. ಅದನ್ನು ಬಳಸಿಕೊಳ್ಳಿ. ಕೌಟುಂಬಿಕ ಬದುಕು ಸಮಾಧಾನಕರ. ಭಿನ್ನಮತ ನಿವಾರಣೆ.
ತುಲಾ
ಆರ್ಥಿಕ ವಿಷಯ ಚಿಂತೆ ಕಾರಣವಾದೀತು. ಖರ್ಚು ಕಡಿಮೆ ಮಾಡಿ ಉಳಿತಾಯಕ್ಕೆ ಗಮನ ಕೊಡಿ. ವೃತ್ತಿಯಲ್ಲಿ ಹೊಂದಾಣಿಕೆಯಿಂದ ಕೆಲಸ ಮಾಡಿ.
ವೃಶ್ಚಿಕ
ಜಡತ್ವ ಬಿಟ್ಟುಬಿಡಿ. ಇಲ್ಲವಾದರೆ ನಿಮ್ಮ ಗುರಿ ಈಡೇರಿಸಲಾರಿರಿ. ಅವಸರದಲ್ಲಿ ಕೆಲಸ ಮುಗಿಸುವ ಧಾವಂತ ಬೇಡ. ಅದು ಪರಿಪೂರ್ಣ ಆಗದು.
ಧನು
ದಂಪತಿಗಳ ಮಧ್ಯೆ ಸಂಘರ್ಷ ನಡೆದೀತು. ಅದನ್ನು ಸಂಧಾನದಿಂದ ಪರಿಹರಿಸಿ. ವೃತ್ತಿಯಲ್ಲಿ ಕೆಲವರ ಅಸಹಕಾರ ಎದುರಿಸುವಿರಿ. ಟೀಕೆ ಕೇಳುವಿರಿ.
ಮಕರ
ಕೆಲವು ವಿಷಯಗಳಲ್ಲಿ ಪ್ರಾಕ್ಟಿಕಲ್ ಆಗಿ ಚಿಂತಿಸಿ. ಭಾವುಕ ಚಿಂತನೆ ತಪ್ಪು ನಿರ್ಧಾರಕ್ಕೆ ಕಾರಣವಾದೀತು. ಖರೀದಿ ಹುಮ್ಮಸ್ಸಿನಿಂದ ಜೇಬಿಗೆ ಕತ್ತರಿ.
ಕುಂಭ
ವ್ಯವಹಾರದಲ್ಲಿ ತಪ್ಪು ಕಲ್ಪನೆಯಿಂದ ಹಿನ್ನಡೆ ಉಂಟಾದೀತು. ಅದಕ್ಕೆ ಅವಕಾಶ ಕೊಡದಿರಿ. ಸರಿಯಾದ ರೀತಿಯಲ್ಲಿ ಸಂವಹನ ನಡೆಸಿರಿ. ಆರ್ಥಿಕ ಒತ್ತಡ.
ಮೀನ
ಇಂದು ಶಾಂತಚಿತ್ತ ಕಾಯ್ದುಕೊಳ್ಳಿ. ಏಕೆಂದರೆ ನಿಮ್ಮನ್ನು ಕೆರಳಿಸುವ ಪ್ರಸಂಗ ಉಂಟಾದೀತು. ಉದ್ಯೋಗ ಕ್ಷೇತ್ರದಲ್ಲಿ ಹಿನ್ನಡೆ ಸಂಭವ.