October 15, 2026
Thursday, October 15, 2026
spot_img

ನೆದರ್‌ಲ್ಯಾಂಡ್ಸ್ ನಿಂದ ಸ್ವೀಡನ್‌ಗೆ ತಲುಪಿದ ಮೋದಿ: ಖುದ್ದು ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತಿಸಿದ ಪ್ರಧಾನಿ ಉಲ್ಫ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐದು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಇಂದು ನೆದರ್‌ಲ್ಯಾಂಡ್ಸ್ ನಿಂದ ಹೊರಟು ಸ್ವೀಡನ್‌ನ ಗೊಟೆನ್‌ಬರ್ಗ್‌ಗೆ ಆಗಮಿಸಿದ್ದಾರೆ.

ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆ ಖುದ್ದು ಸ್ವೀಡನ್ ಪಿಎಂ ಉಲ್ಫ್ ಕ್ರಿಸ್ಟರ್ಸನ್ ಅವರು ವಿಮಾನ ನಿಲ್ದಾಣಕ್ಕೆ ಬಂದು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಅನಿವಾಸಿ ಭಾರತೀಯರಿಂದ ಅದ್ದೂರಿ ಸ್ವಾಗತ

ಈ ವೇಳೆ ಅನಿವಾಸಿ ಭಾರತೀಯ ವಲಸಿಗರು ಸಾಂಪ್ರದಾಯಿಕ ಭರತನಾಟ್ಯ, ಬಂಗಾಳಿ ಕಲಾ ಪ್ರದರ್ಶನದೊಂದಿಗೆ ಅದ್ದೂರಿ ಸ್ವಾಗತಿಸಿದರು.

ವ್ಯಾಪಾರ, ಹೂಡಿಕೆ ಕುರಿತು ನಡೆಯಲಿದೆ ಮಾತುಕತೆ

ಪ್ರಧಾನಿ ಮೋದಿ ಈ ಭೇಟಿ ಸಮಯದಲ್ಲಿ ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರ ಜೊತೆ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಪಾಲುದಾರಿಕೆಯನ್ನು ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ.

Must Read