ಜರ್ಮನಿನಲ್ಲಿ ಮೊಳಗಿದ ಕನ್ನಡ ಹಾಡು: ಭಾರತದ ಸಾಂಸ್ಕೃತಿ ವೈವಿಧ್ಯತೆಯ ಸಂಗಮ ಎಂದ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಜರ್ಮನಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ ಮ್ಯೂನಿಚ್‌ ನಲ್ಲಿ ಭಾರತೀಯ ಸಮುದಾಯ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಭಾರತೀಯ ನೃತ್ಯ ಪ್ರಕಾರಗಳು, ಸಂಸ್ಕೃತಿ, ಹಾಡುಗಳು ಮೇಳೈಸಿತು. ವಿಶೇಷ ಅಂದರೆ ಈ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಕೂಡ ಮೊಳಗಿತ್ತು.
ಆಡಿಸಿದಳು ಯಶೋದೆ ಹಾಡು ಮ್ಯೂನಿಚ್‌ ಕಾರ್ಯಕ್ರಮದಲ್ಲಿ ನೆರೆದಿದ್ದವರನ್ನು ರಂಜಿಸಿತು. ಸಂಗೀತ ಕಾರ್ಯಕ್ರಮದಲ್ಲಿನ ಈ ಹಾಡು ಕನ್ನಡಿಗರನ್ನು ಪುಳಕಿತಗೊಳಿಸಿತು. ಪ್ರತಿಷ್ಠಿತ ಪ್ರಧಾನಿ ಕಾರ್ಯಕ್ರಮದಲ್ಲಿ ಕನ್ನಡದ ಹಾಡು ಮೊಳಗುವ ಮೂಲಕ ಜರ್ಮನಿಯಲ್ಲಿ ಕನ್ನಡದ ಕಂಪು ಮತ್ತಷ್ಟು ಹೆಚ್ಚಿತು.

ಮೋದಿ ಭಾಷಣಕ್ಕೂ ಮೊದಲು ಈ ವಿಶೇಷ ಕಾರ್ಯಕ್ರಮ ಎಲ್ಲರ ಗಮನಸೆಳೆಯಿತು. ಭಾರತದ ಹಲವು ನೃತ್ಯ ಪ್ರಕಾರಗಳು ಅತ್ಯುತ್ತಮವಾಗಿ ಮೂಡಿ ಬಂತು. ಈ ಕುರಿತು ಮೋದಿ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಭಾರತದ ಸಾಂಸ್ಕೃತಿ ವೈವಿಧ್ಯತೆಯ ಸಂಗಮ ಎಂದು ಮೋದಿ ಬಣ್ಣಿಸಿದ್ದರು.

ಇಡೀ ಸಭಾಂಗಣದಲ್ಲಿ ಭಾರತೀಯ ಸಮುದಾಯ ಕಿಕ್ಕಿರಿದು ತುಂಬಿತ್ತು. ಮೋದಿ ಆಗಮಿಸುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಚಪ್ಪಾಳೆ ಮೂಲಕ ಸ್ವಾಗತಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!