ಮಾಲಿನ್ಯರಹಿತ ಶಕ್ತಿವರ್ಧನೆಯ ಕನಸಿಗೆ ಭಾರಿ ಬಲ ಕೊಟ್ಟಿದೆ ಮೋದಿ ಸಂಪುಟದ ಈ ನಿರ್ಧಾರ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಇಂದು ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ನಿಯಮಿತ (ಐಆರ್‌ಇಡಿಎ)ಗೆ ₹ 1500 ಕೋಟಿಗಳ ಈಕ್ವಿಟಿ ಸೇರ್ಪಡೆಗೆ ಅನುಮೋದನೆ ನೀಡಿತು.

ಈ ಇಕ್ವಿಟಿ ಸೇರ್ಪಡೆಯಿಂದಾಗಿ ವಾರ್ಷಿಕ ಸುಮಾರು 10,200 ಉದ್ಯೋಗಾವಕಾಶಗಳ ಸೃಷ್ಟಿಗೆ ಸಹಾಯ ಮಾಡುತ್ತದೆ ಮತ್ತು ಅಂದಾಜು 7.49 ಮಿಲಿಯನ್ ಟನ್‌ಗಳಷ್ಟು ಇಂಗಾಲದ ಡೈಆಕ್ಸೈಡ್‌ಗೆ ಸಮಾನವಾದ ಇಂಗಾಲದ ಹೊರಸೂಸುವಿಕೆಯನ್ನು ಕಡಿತಗೊಳಿಸಲಿದೆ.

ಭಾರತ ಸರಕಾರದಿಂದ ₹1500 ಕೋಟಿಗಳ ಹೆಚ್ಚುವರಿ ಇಕ್ವಿಟಿ ಸೇರ್ಪಡೆ ಐಆರ್‌ಇಡಿಎ ಅನ್ನು ಬಲಿಷ್ಠಗೊಳಿಸಲಿದೆ.

ನವೀಕರಿಸಬಹುದಾದ ಇಂಧನ ವಲಯಕ್ಕೆ ಸುಮಾರು ₹ 12000 ಕೋಟಿ ಸಾಲ ನೀಡಲು, ಆ ಮೂಲಕ ಅಂದಾಜು 3500-4000 ಮೆಗಾವ್ಯಾಟ್‌ನ ಹೆಚ್ಚುವರಿ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ವಲಯದ ಸಾಲದ ಅಗತ್ಯ ಪೂರೈಸಲು ನೆರವಾಗುತ್ತದೆ.
ಒಟ್ಟಾರೆ ಅದರ ಮೌಲ್ಯವನ್ನು ವರ್ಧಿಸುತ್ತದೆ.

ಇದು ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚುವರಿ ಹಣಕಾಸು ಸಹಾಯ ಮಾಡಲು ನೆರವಾಗುತ್ತದೆ. ಆ ಮೂಲಕ ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ ಸರಕಾರದ ಗುರಿ ಸಾಧನೆಗೆ ಉತ್ತಮ ಕೊಡುಗೆ ನೀಡಲಿದೆ.

ಕ್ಯಾಪಿಟಲ್-ಟು-ರಿಸ್ಕ್ ವೆಯ್ಟೆಡ್ ಅಸೆಟ್ಸ್ ರೇಷಿಯೊ (ಸಿಆರ್‌ ಎಆರ್) ಸುಧಾರಣೆ, ಇದರಿಂದ ಅದರ ಸಾಲ ಮತ್ತು ಎರವಲು ಕಾರ್ಯಾಚರಣೆಗೆ ಸಹಕಾರಿಯಾಗುತ್ತದೆ.

ಎಂಎನ್‌ಆರ್‌ಇಯ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಐಆರ್‌ಇಡಿಎ- ಮಿನಿ ರತ್ನ (ವರ್ಗ-1)ರಲ್ಲಿನ ಕಂಪನಿಯಾಗಿದ್ದು, ಅದನ್ನು ನವೀಕರಿಸಬಹುದಾದ ಇಂಧನ (ಆರ್‌ಇ) ವಲಯದಲ್ಲಿ ವಿಶೇಷ ಬ್ಯಾಂಕಿಂಗೇತರ ಹಣಕಾಸು ಏಜೆನ್ಸಿಯಾಗಿ ಕೆಲಸ ಮಾಡಲು 1987ರಲ್ಲಿ ಸ್ಥಾಪಿಸಲಾಯಿತು. 34 ವರ್ಷಗಳಿಗಿಂತಲೂ ಅಧಿಕ ಕಾಲದ ತಾಂತ್ರಿಕ-ವಾಣಿಜ್ಯ ಅನುಭವ ಹೊಂದಿರುವ ಐಆರ್‌ಇಡಿಎ, ಈ ವಲಯದಲ್ಲಿ ಸಾಲ ನೀಡಲು ಹಣಕಾಸು ಸಂಸ್ಥೆಗಳು/ಬ್ಯಾಂಕ್‌ಗಳಿಗೆ ವಿಶ್ವಾಸವನ್ನು ತುಂಬಿ ನವೀಕರಿಸಬಹುದಾದ ಯೋಜನೆಗಳಿಗೆ ಹಣಕಾಸು ಒದಗಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!