ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ರೊಂದಿಗೆ ಮೋದಿ ‘ಚಾಯ್‌ ಪೆ ಚರ್ಚಾ’

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಿ-7 ರಾಷ್ಟ್ರಗಳ ಶೃಂಗ ಸಬೆಗೆ ವಿಶೇಷ ಆಂತ್ರಿತರಾಗಿ ಜರ್ಮನಿ ಪ್ರವಾಸದಲ್ಲಿರುವ ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿ ಫ್ರಾನ್ಸ್‌ ನ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರೋನ್‌ ಅವರೊಂದಿಗೆ ಇಂದು ಮುಂಜಾನೆ ಚಾಯ್‌ ಪೆ ಚರ್ಚಾ ಮಾಡಿದರು.

ಇಂದು ಮುಂಜಾನೆ ಮ್ಯಾಕ್ರೋನ್‌ ರೊಂದಿಗೆ ಬೆಳಗಿನ ಟಿ ಸವಿಯುತ್ತಾ ಮೋದಿ ಒಂದು ಅನೌಪಚಾರಿಕ ಮಾತುಕತೆ ನಡೆಸಿದರು. ಹೀಗೆ ಪ್ರಧಾನಿಗಳಿಬ್ಬರು ಟೀ ಕುಡಿಯುತ್ತಾ ಚರ್ಚೆಯಲ್ಲಿ ತೊಡಗಿರುವ ಫೋಟೋ ಎಲ್ಲಾ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ನಿನ್ನೆ ಬಿತ್ತರವಾದ ವೀಡಿಯೋವೊಂದು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್‌ ಅವರು ಮೋದಿಯೊಂದಿಗೆ ಹಸ್ತಲಾಘವ ಮಾಡಲು ಓಡೋಡಿ ಬಂದಿರುವುದನ್ನು ತೋರಿಸಿತ್ತು. ಪ್ರಸ್ತುತ ಈ ಪೋಟೋಗಳು ಭಾರತದ ಪ್ರಧಾನಿಯ ಪ್ರಭಾವಳಿಯನ್ನು ಬಿತ್ತರಿಸುವಂತಿದೆ.

ಜಿ7 ಶೃಂಗಸಭೆಯಲ್ಲಿ ವಿಶ್ವದ ಏಳು ಶ್ರೀಮಂತ ರಾಷ್ಟ್ರಗಳ ನಾಯಕರು ರಷ್ಯಾ ಉಕ್ರೇನ್ ಯುದ್ಧ ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹ ಸೇರಿದಂತೆ ಹಲವಾರು ಪ್ರಮುಖ ಜಾಗತಿಕ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.

ಯುಕೆ ಪ್ರಧಾನಿ ಬೋರಿಸ್ ಜಾನ್ಸನ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ, ಜಪಾನ್ ಪ್ರಧಾನಿ ಯೋಶಿಹೈಡ್ ಸುಗಾ ಮತ್ತು ಯುಎಸ್ ಅಧ್ಯಕ್ಷ ಜೋ ಬಿಡನ್ ಈ ವರ್ಷದ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!