ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಹಾಗೂ ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೀವರ್ ನಡುವೆ ಇಂದು ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯಿತು.
ಭಾರತ ಮತ್ತು ಬೆಲ್ಜಿಯಂ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ವ್ಯಾಪಾರ, ರಕ್ಷಣಾ ಕ್ಷೇತ್ರ, ನಿರ್ಣಾಯಕ ಖನಿಜಗಳು, ಶುದ್ಧ ಇಂಧನ ಮತ್ತು ಉನ್ನತ ತಂತ್ರಜ್ಞಾನ ಸೇರಿದಂತೆ ಹಲವು ವಲಯಗಳಲ್ಲಿ ಸಹಕಾರ ವಿಸ್ತರಿಸಲು ಎರಡು ದೇಶಗಳು ಒಪ್ಪಿಕೊಂಡಿವೆ.
ಸಭೆಯ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಕಳೆದ ತ್ರೈಮಾಸಿಕದಲ್ಲಿ ಭಾರತ ಶೇ.7.8ರಷ್ಟು ಆರ್ಥಿಕ ಬೆಳವಣಿಗೆ ದಾಖಲಿಸಿದ್ದು, ಭಾರತದ ಬೆಳವಣಿಗೆಯ ಪಯಣ ಜಗತ್ತಿಗೆ ಹೊಸ ವಿಶ್ವಾಸ ಮತ್ತು ಅವಕಾಶಗಳ ಮೂಲವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಯಾವುದೇ ಅನಿಶ್ಚಿತತೆ ಮುಂದುವರಿದರು ಭಾರತದ ಆರ್ಥಿಕತೆ ತನ್ನ ವೇಗವನ್ನು ಕಾಯ್ದುಕೊಂಡಿದೆ ಎಂದರು.
ಇದನ್ನೂ ಓದಿ:
ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ದ್ವಿಪಕ್ಷೀಯ ಬಾಂಧವ್ಯದ ಪ್ರಮುಖ ಆಧಾರ ಎಂದು ಬಣ್ಣಿಸಿದ ಮೋದಿ, ಎರಡೂ ದೇಶಗಳ ನಡುವೆ ಸೇನಾ ವಿನಿಮಯ ಹಾಗೂ ತರಬೇತಿ ಸಹಕಾರವನ್ನು ಹೆಚ್ಚಿಸಲು ಒಪ್ಪಿಗೆ ದೊರೆತಿದೆ ಎಂದರು. ರಕ್ಷಣಾ ಉದ್ಯಮಗಳ ನಡುವೆ ಸಹಭಾಗಿತ್ವದ ಮೂಲಕ ರಕ್ಷಣಾ ಉತ್ಪನ್ನಗಳ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಹೇಳಿದರು.
ಇದೇ ವೇಳೆ ಭಾರತ–ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದದ ಅಂತಿಮಗೊಳಿಸುವಿಕೆಯನ್ನು ಮಹತ್ವದ ಮೈಲಿಗಲ್ಲು ಎಂದು ಬೆಲ್ಜಿಯಂ ಪ್ರಧಾನಿ ಬಣ್ಣಿಸಿದರು.



