Monday, October 3, 2022

Latest Posts

ಮೊದಲ ಬಾರಿಗೆ ಜನ್ಮದಿನದಂದು ಅಮ್ಮನ ಆಶೀರ್ವಾದ ಪಡೆಯದ ಮೋದಿ: ಇದರ ಹಿಂದಿನ ಕಾರಣ ಬಿಚ್ಚಿಟ್ಟ ಪ್ರಧಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆಯುವುದು ವಾಡಿಕೆ. ಆದರೆ ಇಂದು ಮೋದಿಯವರು ಬಿಡುವಿಲ್ಲದ ಕಾರ್ಯಕ್ರಮಗಳ ಕಾರಣಕ್ಕೆ ಇದೆ ಮೊದಲ ಬಾರಿಗೆ ತಾಯಿ ಆಶೀರ್ವಾದ ಪಡೆಯಲು ಸಾಧ್ಯವಾಗಿಲ್ಲ.

ಈ ಕುರಿತು ಮಧ್ಯಪ್ರದೇಶದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಸ್ಮರಿಸಿಕೊಂಡ ನರೇಂದ್ರ ಮೋದಿಯವರು, ನನ್ನ ತಾಯಿಯ ಪಾದಸ್ಪರ್ಶಿಶಿ ಆಶೀರ್ವಾದ ಪಡೆಯಲು ಈ ಬಾರಿ ಸಾಧ್ಯವಾಗಿಲ್ಲ. ಆದರೆ ಇಂದು ಬುಡಕಟ್ಟು ಪ್ರದೇಶಗಳ ಲಕ್ಷಾಂತರ ತಾಯಂದಿರು ನನ್ನನ್ನು ಆಶೀರ್ವದಿಸಿದ್ದಾರೆ ಎಂದು ಹೇಳಿದ್ದಾರೆ.

ದೇಶದಿಂದ ಕಣ್ಮರೆಯಾಗಿದ್ದ ಚೀತಾಗಳು ಏಳು ದಶಕಗಳ ಬಳಿಕ ಭಾರತಕ್ಕೆ ಆಗಮಿಸಿದ್ದು, ಇವುಗಳನ್ನು ಭಾರತದ ಕಾಡಿನೊಳಗೆ ಬಿಡಲು ಖುದ್ದು ನರೇಂದ್ರ ಮೋದಿ ಅವರೇ ಆಗಮಿಸಿದ್ದರು. ಅಲ್ಲದೆ ಆ ನಂತರ ಹಲವಾರು ಕಾರ್ಯಕ್ರಮಗಳಲ್ಲಿ ಇಂದು ಪ್ರಧಾನಿಯವರು ಪಾಲ್ಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!