ಒಡಿಶಾದ 4 ಜಿಲ್ಲೆಗಳ ಎಲ್ಲಾ ಕ್ಷಯ ರೋಗಿಗಳನ್ನು ದತ್ತು ಪಡೆದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಟಿಬಿ ನಿರ್ಮೂಲನಾ ಕಾರ್ಯಕ್ರಮದ ಭಾಗವಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒಡಿಶಾದ ನಾಲ್ಕು ಜಿಲ್ಲೆಗಳಲ್ಲಿನ ಎಲ್ಲಾ ಕ್ಷಯ ರೋಗಿಗಳನ್ನು ದತ್ತು ಪಡೆದಿದ್ದಾರೆ. ಈ ಈ ಮೂಲಕ ಟಿಬಿ ಮುಕ್ತ ಭಾರತ ಅಭಿಯಾನಕ್ಕೆ ಸಾಥ್ ಕೊಟ್ಟಿದ್ದಾರೆ.

2025 ರ ವೇಳೆಗೆ ಟಿಬಿ ಮುಕ್ತ ಭಾರತದ ಗುರಿಯನ್ನು ಸಾಧಿಸಲು ಮತ್ತು ಪ್ರಧಾನಿ ಮೋರಿಯವರ 72 ನೇ ಹುಟ್ಟುಹಬ್ಬದ ಅಂಗವಾಗಿ ಒಡಿಶಾದ ಜಿಲ್ಲೆಗಳಲ್ಲಿನ ಕ್ಷಯ ರೋಗಿಗಳನ್ನು ದತ್ತು ಪಡೆದಿದ್ದಾರೆ.

ಪ್ರಧಾನಮಂತ್ರಿಯವರ ಕ್ಷಯರೋಗ ಗುರಿಯನ್ನು ಸಾಕಾರಗೊಳಿಸಲು ಸಹಾಯ ಮಾಡುವ ಟಿಬಿ ಮುಕ್ತ ಭಾರತ ಉಪಕ್ರಮದ ಭಾಗವಾಗಿ ನಾನು ಅಂಗುಲ್, ದಿಯೋಗರ್, ಧೆಂಕನಲ್ ಮತ್ತು ಸಂಬಲ್‌ಪುರದ ನಾಲ್ಕು ಜಿಲ್ಲೆಗಳಲ್ಲಿ ಎಲ್ಲಾ ಟಿಬಿ ರೋಗಿಗಳನ್ನು ದತ್ತು ತೆಗೆದುಕೊಂಡಿದ್ದೇನೆ. 2025 ರ ವೇಳೆಗೆ ಭಾರತವನ್ನು ಮುಕ್ತಗೊಳಿಸಿ ಮತ್ತು ಮೋದಿ ಜಿ ಅವರ ಜನ್ಮದಿನದ ಪ್ರಯುಕ್ತ ಈ ಕಾರ್ಯ ಮಾಡಿರುವುದುದಾಗಿ ಕೇಂದ್ರ ಸಚಿವರು ಟ್ವೀಟ್‍ ಮಾಡಿದ್ದಾರೆ.

ಒಡಿಶಾದ ಈ ನಾಲ್ಕು ಜಿಲ್ಲೆಗಳಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ನಿ-ಕ್ಷಯ ಮಿತ್ರನಾಗಿ ನನ್ನ ಬೇಷರತ್ ಬೆಂಬಲವನ್ನು ನಾನು ಪ್ರತಿಜ್ಞೆ ಮಾಡುತ್ತೇನೆ. ಮೊದಲಿಗೆ, ಟಿಬಿ ವಿರುದ್ಧದ ಹೋರಾಟವನ್ನು ಬಲಪಡಿಸಲು ನಾನು 72 ಫಲಾನುಭವಿಗಳಿಗೆ ಹೆಚ್ಚುವರಿ ಪೌಷ್ಟಿಕಾಂಶದ ಬೆಂಬಲವನ್ನು ಕಳುಹಿಸುತ್ತಿದ್ದೇನೆ ಎಂದರು. .

ಟಿಬಿ (ಕ್ಷಯರೋಗ) ಮುಕ್ತ ಭಾರತ್ ಅಭಿಯಾನದ ಪ್ರಧಾನ ಮಂತ್ರಿಯವರ ದೃಷ್ಟಿಗೆ ಅನುಗುಣವಾಗಿ, ಭಾರತೀಯ ಕೈಗಾರಿಕಾ ಒಕ್ಕೂಟ (CII) ಪೌಷ್ಠಿಕಾಂಶದ ಬೆಂಬಲವನ್ನು ನೀಡುವ ಮೂಲಕ 35,000 ಕ್ಕೂ ಹೆಚ್ಚು ಕ್ಷಯರೋಗ (ಟಿಬಿ) ರೋಗಿಗಳನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!