July 13, 2026
Monday, July 13, 2026
spot_img

ಮೋದಿ ಡಿಪ್ಲೊಮಸಿ ಮ್ಯಾಜಿಕ್: ಇಂಡೋನೇಷ್ಯಾ ಜೊತೆ ರಕ್ಷಣೆ, ಶಿಕ್ಷಣ, ತಂತ್ರಜ್ಞಾನದ ಬಿಗ್ ಡೀಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಇಂಡೋನೇಷ್ಯಾ ನಡುವಿನ ಶತಮಾನಗಳ ಸಾಂಸ್ಕೃತಿಕ ಬಾಂಧವ್ಯ ಈಗ ರಕ್ಷಣೆ, ತಂತ್ರಜ್ಞಾನ, ಶಿಕ್ಷಣ ಮತ್ತು ಆರ್ಥಿಕ ಸಹಕಾರದ ಮೂಲಕ ಮತ್ತಷ್ಟು ಬಲಿಷ್ಠವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉಭಯ ದೇಶಗಳು ಹಲವು ಮಹತ್ವದ ಒಪ್ಪಂದಗಳಿಗೆ ಚಾಲನೆ ನೀಡಿದ್ದು, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೊಸ ಕಾರ್ಯತಂತ್ರದ ಪಾಲುದಾರಿಕೆಗೆ ವೇಗ ಸಿಕ್ಕಿದೆ.

ಸಂಸ್ಕೃತಿಯಿಂದ ಕಾರ್ಯತಂತ್ರದವರೆಗೆ

ಭಾರತವು ಇಂಡೋನೇಷ್ಯಾದ ಯೋಗ್ಯಕರ್ತಾದಲ್ಲಿರುವ 9ನೇ ಶತಮಾನದ ಪ್ರಂಬನನ್ ಹಿಂದೂ ದೇವಾಲಯದ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ ನೆರವು ನೀಡಲಿದೆ. ರಾಮಾಯಣ, ಮಹಾಭಾರತ, ಸಂಸ್ಕೃತ ಮತ್ತು ಬಾಲಿಯಂತಹ ಐತಿಹಾಸಿಕ ಸಾಂಸ್ಕೃತಿಕ ನಂಟುಗಳು ಈಗ ಎರಡೂ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧಕ್ಕೂ ಬಲ ತುಂಬಿವೆ. ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಭಾರತೀಯ ಪರಂಪರೆಯೊಂದಿಗೆ ತಮ್ಮ ನಂಟನ್ನು ಉಲ್ಲೇಖಿಸಿರುವುದು ಈ ಸ್ನೇಹದ ಮತ್ತೊಂದು ಸಂಕೇತವಾಗಿದೆ.

ಇದನ್ನೂ ಓದಿ:

ರಕ್ಷಣೆ, ತಂತ್ರಜ್ಞಾನದಲ್ಲಿ ಬಿಗ್ ಡೀಲ್

ಬ್ರಹ್ಮೋಸ್ ಹಾಗೂ ಅಸ್ತ್ರ ಕ್ಷಿಪಣಿಗಳ ಖರೀದಿ, ಸಬಾಂಗ್ ಬಂದರಿನ ಜಂಟಿ ಅಭಿವೃದ್ಧಿ, ಸೇನಾ ತರಬೇತಿ, ಬಾಹ್ಯಾಕಾಶ ಸಹಕಾರ ಮತ್ತು ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ಕ್ಷೇತ್ರಗಳಲ್ಲಿ ಉಭಯ ದೇಶಗಳು ಮಹತ್ವದ ಸಹಭಾಗಿತ್ವ ವಿಸ್ತರಿಸಿವೆ. ಜೊತೆಗೆ ಅಪರೂಪದ ಖನಿಜಗಳ ಉತ್ಪಾದನೆ ಹಾಗೂ ಕೈಗಾರಿಕಾ ಹೂಡಿಕೆಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ.

ಶಿಕ್ಷಣ, ಆರೋಗ್ಯಕ್ಕೂ ಹೊಸ ಅಧ್ಯಾಯ

ಭಾರತದ ಶಿಕ್ಷಣ ಮತ್ತು ಸಾರ್ವಜನಿಕ ಸೇವಾ ಮಾದರಿಗಳತ್ತ ಇಂಡೋನೇಷ್ಯಾ ಆಸಕ್ತಿ ತೋರಿದ್ದು, ಐಐಎಂ ಬೆಂಗಳೂರಿನ ಮೊದಲ ವಿದೇಶಿ ಕ್ಯಾಂಪಸ್ ಅನ್ನು ಇಂಡೋನೇಷ್ಯಾದಲ್ಲಿ ಆರಂಭಿಸಲು ಯೋಜಿಸಲಾಗಿದೆ. ಆರೋಗ್ಯ, ಔಷಧ ಪೂರೈಕೆ, ಆಹಾರ ಭದ್ರತೆ, ಚುನಾವಣಾ ತಂತ್ರಜ್ಞಾನ ಮತ್ತು ವಿಪತ್ತು ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಮೂಲಕ ಉಭಯ ರಾಷ್ಟ್ರಗಳು ದೀರ್ಘಾವಧಿಯ ಅಭಿವೃದ್ಧಿ ಪಾಲುದಾರಿಕೆಗೆ ಅಡಿಪಾಯ ಹಾಕಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !