ಮೋದಿ ಸರ್ಕಾರದ ಹೊಸ ಹೆಜ್ಜೆ: ಶೀಘ್ರವೇ ಖಾಸಗಿ ವಲಯಕ್ಕೆ ರಕ್ಷಣಾ ಆರ್-ಡಿ ಮುಕ್ತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನರೇಂದ್ರ ಮೋದಿ ಸರ್ಕಾರವು ಸಾರ್ವಜನಿಕ ವಲಯಕ್ಕೆ ಸ್ಪರ್ಧೆ ನೀಡಲು ಮತ್ತು ಸಶಸ್ತ್ರ ಪಡೆಗಳ ಅವಶ್ಯಕತೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ನಿರ್ದಿಷ್ಟ ವೇದಿಕೆಗಳಿಗಾಗಿ ಖಾಸಗಿ ವಲಯಕ್ಕೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಮುಕ್ತಗೊಳಿಸಲಿದೆ.
ರಕ್ಷಣಾ ಸ್ವಾಧೀನ ಮಂಡಳಿ(ಡಿಎಸಿ)ಯ ಮುಂದಿನ ಸಭೆಯಲ್ಲಿ ರಕ್ಷಣಾ ಸ್ವಾಧೀನ ಪ್ರಕ್ರಿಯೆ(ಡಿಎಪಿ)ಗೆ ತಿದ್ದುಪಡಿಗಳನ್ನು ತರಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಭಾರತೀಯ ಖಾಸಗಿ ವಲಯಕ್ಕೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ (ಆರ್-ಡಿ)ಯನ್ನು ಮುಕ್ತಗೊಳಿಸುವ ಉದ್ದೇಶದಿಂದ ತಿದ್ದುಪಡಿ ತರಲು ಸರ್ಕಾರ ತೀರ್ಮಾನಿಸಿದೆ.

ತಿದ್ದುಪಡಿಗಳಿಂದಾಗಿ ಭಾರತೀಯ ಖಾಸಗಿ ವಲಯಕ್ಕೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕಂಪನಿಗಳಲ್ಲಿ ಪ್ರಮುಖ ಪಾಲನ್ನು ಪಡೆಯಲು ಅವಕಾಶ ದೊರೆಯಲಿದೆ. ಇದು ಡ್ರೋನ್‌ಗಳು, ಹೆಲಿಕಾಪ್ಟರ್‌ಗಳು, ವಿಮಾನಗಳು ಮತ್ತು ಸುಧಾರಿತ ಜಲಾಂತರ್ಗಾಮಿಗಳಂತಹ ಪ್ರಮುಖ ವೇದಿಕೆಗಳ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಒಂದು ಮಹತ್ವದ ಬೆಳವಣಿಗೆಯಾಗಿದೆ. ಇಲ್ಲಿವರೆಗೆ ಸರ್ಕಾರಿ ಡಿಪಿಯುಎಸ್‌ಗಳು ಮತ್ತು ಪ್ರಯೋಗಾಲಯಗಳಿಗೆ ಮಾತ್ರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗೆ ಅನುಮತಿ ನೀಡಲಾಗಿತ್ತು. ಇನ್ಮುಂದೆ ಖಾಸಗಿ ವಲಯಕ್ಕೆ ಆರ್ ಅಂಡ್ ಡಿಗೂ ಮುಕ್ತವಾಗಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!