April 17, 2026
Friday, April 17, 2026
spot_img

ಮೋದಿಯಿಂದ ಪ್ರಧಾನಮಂತ್ರಿ ನೂತನ ಕಚೇರಿ ‘ಸೇವಾ ತೀರ್ಥ’ ಲೋಕಾರ್ಪಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ನೂತನ ಪ್ರಧಾನಮಂತ್ರಿ ಕಚೇರಿ ‘ಸೇವಾ ತೀರ್ಥ’ ವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.

ಆಧುನಿಕ, ಪರಿಸರಸ್ನೇಹಿ, ಸುರಕ್ಷಿತ, ದಕ್ಷ ಮತ್ತು ನಾಗರಿಕ ಕೇಂದ್ರಿತ ಆಡಳಿತ ಪರಿಸರ ವ್ಯವಸ್ಥೆಯನ್ನು ಬೆಳೆಸುವ ಉದ್ದೇಶದಿಂದ ಸೇವಾ ತೀರ್ಥ ನಿರ್ಮಿಸಲಾಗಿದೆ. ಸೇವಾ ತೀರ್ಥ ಎಂದು ಹೆಸರಿಡಲಾಗಿದೆ. ಈ ಹೆಸರಿನ ಕೆಳಗೆ ನಾಗರಿಕ ದೇವೋ ಭವ (ಪ್ರಜೆಗಳೇ ದೇವರು) ಎಂದು ಕೂಡ ಬರೆಯಲಾಗಿದೆ.

ಅನೇಕ ದಶಕಗಳ ಕಾಲ ಸೆಂಟ್ರಲ್​ ವಿಸ್ಟಾ ಪ್ರದೇಶದಲ್ಲಿ ಅನೇಕ ಪ್ರಮುಖ ಸರ್ಕಾರಿ ಕಚೇರಿಗಳು ಮತ್ತು ಸಚಿವಾಲಯಗಳು ಹಲವು ಪ್ರತ್ಯೇಕ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಕಾರ್ಯಾಚರಣೆಯಲ್ಲಿ ಸಮನ್ವಯ ಸಾಧಿಸುವ ಸವಾಲುಗಳು, ನಿರ್ವಹಣಾ ವೆಚ್ಚಗಳ ಹೆಚ್ಚಳವಾಗುತ್ತಿತ್ತು. ಈ ಹೊಸ ಕಟ್ಟಡ ಸಂಕೀರ್ಣ ಆಧುನಿಕತೆ ಮತ್ತು ಭವಿಷ್ಯ ಸಿದ್ಧತೆಯ ಸೌಲಭ್ಯದೊಂದಿಗೆ ಆಡಳಿತ ಕಾರ್ಯಾಚರಣೆಗಳನ್ನು ಕ್ರೋಢಿಕರಣಗೊಳಿಸುತ್ತಿದೆ.

ಕರ್ತವ್ಯ ಭವನ-1 ಮತ್ತು 2ರಲ್ಲಿ ಹಣಕಾಸು ಸಚಿವಾಲಯ, ರಕ್ಷಣಾ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಶಿಕ್ಷಣ ಸಚಿವಾಲಯ, ಸಂಸ್ಕೃತಿ, ಕಾನೂನು ಮತ್ತು ನ್ಯಾಯ, ಮಾಹಿತಿ ಮತ್ತು ಪ್ರಸಾರ, ಕೃಷಿ ಮತ್ತು ರೈತರ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಬುಡಕಟ್ಟು ಸಚಿವಾಲಯ ಸೇರಿದಂತೆ ಪ್ರಮುಖ ಸಚಿವಾಲಯಗಳಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !