ಭಾರತದ ಇತಿಹಾಸದಲ್ಲೇ ಮೋದಿ ಅತ್ಯಂತ ಯಶಸ್ವಿ ಪ್ರಧಾನಿ: ಮುಖೇಶ್ ಅಂಬಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಇತಿಹಾಸದಲ್ಲಿಯೇ ಮೋದಿ ಅತ್ಯಂತ ಯಶಸ್ವಿ ಪ್ರಧಾನಿ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ.

ವೈಬ್ರೆಂಟ್ ಗುಜರಾತ್ ಸಮ್ಮಿಟ್‌ನಲ್ಲಿ ಮಾತನಾಡಿದ್ದು, ಗುಜರಾತ್ ಇಷ್ಟು ಬೆಳವಣಿಗೆ ಹೊಂದಲು ಪ್ರಧಾನಿ ಮೋದಿಯೇ ಕಾರಣ. ನಾವು ಕಂಡಿದ್ದ ಗುಜರಾತ್‌ಗೂ ಈಗಿರುವ ಗುಜರಾತ್‌ಗೂ ತುಂಬಾ ವ್ಯತ್ಯಾಸ ಇದೆ. ಇದೆಲ್ಲದಕ್ಕೂ ಪ್ರಧಾನಿ ಮೋದಿ ಕಾರಣ ಎಂದು ಶ್ಲಾಘಿಸಿದ್ದಾರೆ.

2047 ವೇಳೆಗೆ ಗುಜರಾತ್ ಮೂರು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಇದನ್ನು ಯಾರೂ ತಡೆಯಲಾಗುವುದಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!