ಮೋದಿ ಅವತಾರ ಪುರುಷನಿದ್ದಂತೆ, ಕೊನೆವರೆಗೂ ಅವರೇ ಪ್ರಧಾನಿ: ಯುಪಿ ಮಂತ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ ಅವತಾರ ಪುರುಷನಿದ್ದಂತೆ, ಅವರು ಬಯಸಿದರೆ ಸಾಯುವವರೆಗೂ ಈ ದೇಶದ ಪ್ರಧಾನಿಯಾಗಿರುತ್ತಾರೆ ಎಂದು ಉತ್ತರ ಪ್ರದೇಶದ ಸಚಿವೆ ಗುಲಾಬ್ ದೇವಿ ಹೇಳಿದ್ದಾರೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಪ್ರಧಾನಿಯಾಗುತ್ತಾರೆಯೇ ಎಂದು ಪ್ರತಿಪಕ್ಷ ನಾಯಕರೊಬ್ಬರು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು. ಮೋದಿ ಅವತಾರ ಪುರುಷ ಇದ್ದಂತೆ. ಅವರು ಮಹಾನ್ ಜ್ಞಾನವುಳ್ಳ ವ್ಯಕ್ತಿ. ಅವರಿಗೆ ಯಾವುದೇ ಸ್ಪರ್ಧೆಯಿಲ್ಲ. ಕೊನೆವರೆಗೂ ಅವರೇ ಈ ದೇಶದ ಪ್ರಧಾನಿಯಾಗಿರುತ್ತಾರೆ ಎಂದು ಗುಲಾಬ್ ದೇವಿ ಹೇಳಿದ್ದಾರೆ. ಇಡೀ ದೇಶವೇ ಅವರ ಮಾತನ್ನು ಪಾಲಿಸುತ್ತಿದೆ ಎಂದರೆ ಒಬ್ಬ ವ್ಯಕ್ತಿಯ ಹಿರಿಮೆಗೆ ಇದಕ್ಕಿಂತ ಉದಾಹರಣೆ ಏನು ಬೇಕು? ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿಗೆ ಇಂತಹ ಹೊಗಳಿಕೆ ಹೊಸದೇನಲ್ಲ. ಈ ಹಿಂದೆ ಅನೇಕರು ಅವರನ್ನು ಮಹನೀಯರಿಗೆ ಮತ್ತು ಪುರಾಣ ಪುರುಷರೊಂದಿಗೂ ಸಹ ಹೋಲಿಕೆ ಮಾಡಿದ್ದಾರೆ. ಬಿಜೆಪಿ ನಾಯಕರು ಸಂದರ್ಭ ಬಂದಾಗಲೆಲ್ಲ ಇಂತಹ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!