ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ದಿನದ ರೋಡ್ ಶೋ ಶುರುವಾಗಿದೆ. ನ್ಯೂ ತಿಪ್ಪಸಂದ್ರದ ಬಳಿ ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಬಳಿಕ ರೋಡ್ ಶೋ ರಥವೇರಿ ಪ್ರಧಾನಿ ಜನರತ್ತ ಕೈ ಬೀಸುತ್ತಿದ್ದಾರೆ. ಆರು ಕಿಮೀ ರೋಡ್ ಶೋ ಟ್ರಿನಿಟಿ ಸರ್ಕಲ್ವರೆಗೆ ನಡೆಯಲಿದೆ.
ಪ್ರತಿಕೂಲ ಹವಾಮಾನದಲ್ಲೂ ಮೋದಿಗಾಗಿ ಜನ ರಸ್ತೆ ಇಕ್ಕೆಲಗಳಲ್ಲಿ ಕಾದು ಕುಳಿತಿದ್ದಾರೆ. ಮೋದಿ ಮೋದಿ ಎಂಬ ಜಯಘೋಷ ಎಲ್ಲೆಡೆ ಮೊಳಗುತ್ತಿದೆ. ಮೋದಿ ಮೇಲೆ ಪುಷ್ಟ ವೃಷ್ಟಿಯಾಗುತ್ತಿದೆ. ಮೋದಿ ನೋಡಲು ಪುಟ್ಟ ಮಕ್ಕಳಿಂದ ವೃದ್ಧರವರೆಗೂ ಜನ ಸಾಲುಗಟ್ಟಿ ನಿಂತಿದ್ದಾರೆ. ಹೂಮಳೆಗೆರದು ಪ್ರಧಾನಿಗೆ ಸ್ವಾಗತ ಕೋರುತ್ತಿದ್ದಾರೆ ಜನ. ರೋಡ್ ಶೋ ಉದ್ದಕ್ಕೂ ಬಿಜೆಪಿ, ಮೋದಿ ಬ್ಯಾನರ್ಗಳು ರಾರಾಜಿಸುತ್ತಿವೆ.