ಮೋದಿಜೀ ಅವರ 7 ವರ್ಷಗಳ ಆಡಳಿತದಲ್ಲಿ ಜನಪರ ಕಾರ್ಯಕ್ರಮ ಜಾರಿ: ಸಚಿವ ಬಿ.ಶ್ರೀರಾಮುಲು

ಹೊಸ ದಿಗಂತ ವರದಿ, ಬಳ್ಳಾರಿ:

ಕಳೆದ 70 ವರ್ಷಗಳ ಆಡಳಿತದಲ್ಲಿ ನೀಡದ ಕೊಡುಗೆಗಳನ್ನು ಮೋದಿಜೀ ಅವರು 7 ವರ್ಷಗಳಲ್ಲಿ ಸಾಕಷ್ಟು ಜನೊರ ಕೊಡುಗೆಗಳನ್ನು ನೀಡುವ ಮೂಲಕ ವಿಶ್ವದ ಗಮನಸೆಳೆದಿದ್ದಾರೆ ಎಂದು‌ ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ನಗರದ‌ ಭಾಜಪ ‌ಜಿಲ್ಲಾ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಧಾನ ಮಂತ್ರಿ ‌ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಏಳು‌ ವರ್ಷಗಳಲ್ಲಿ ಜನಪರ ಬಜೆಟ್ ಮಂಡಿಸಿ ಇತಿಹಾಸ ಸೃಷ್ಟಿಸಿದೆ. ದೂರದೃಷ್ಟಿ ಇಟ್ಟುಕೊಂಡು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜನಪ್ರೀಯ ಬಜೆಟ್ ಮಂಡಿಸಿದ್ದು, ಎಲ್ಲ ವರ್ಗಗಳಿಗೂ ಸಾಕಷ್ಟು ಕೊಡುಗೆಗಳನ್ನು ‌ನೀಡಲಾಗಿದೆ. ಕೋವಿಡ್-19, ಒಮಿಕ್ರಾನ್, ಮೊದಲನೇ ಅಲೆ, ಎರಡನೇ ಅಲೆ ಬಿಸಿ ಎಲ್ಲರಿಗೂ ತಟ್ಟಿದೆ, ಈ ವೇಳೆ ಬಜೆಟ್ ಸ್ವರೂಪ ಹೇಗಿರಲಿದೆ ಎನ್ನುವ‌ ಕುತೂಹಲವಿತ್ತು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು‌ ಜನಪರ ‌ಬಜೆಟ್‌ ಮಂಡಿಸುವ‌ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಕೊರೋನಾ ದಿಂದ ಆರ್ಥಿಕ ಸಂಕಷ್ಟ ಎದುರಾಗಿತ್ತು, ಆರ್ಥಿಕ ವ್ಯವಸ್ಥೆ ಸದೃಢಗೊಳಿಸಲು ಅನೇಕ ಕ್ರಮಗಳನ್ನು ಕೈಗೊಂಡಿದೆ. ರಸ್ತೆ, ರೈಲ್ವೆ ಮಾರ್ಗ, ವಿಮಾನ ನಿಲ್ದಾಣ, ಬಂದರ್, ಸರಕು ಸಾಗಣೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ರೈಲ್ವೆ ಯೋಜನೆಗೆ ರಾಜ್ಯಕ್ಕೆ 6 ಸಾವಿರ ಕೋಟಿ ನೀಡಲಾಗಿದೆ. ಮೇಕ್ ಇನ್ ಇಂಡಿಯಾ ಮೂಲಕ ದೇಶದ ಸಮಗ್ರ ಅಭಿವೃದ್ಧಿ ಗೆ ಕೆಲಸ ಮಾಡಿದ್ದಾರೆ.
44 ಬೃಹತ್ ರೈಲ್ವೆ ಮಾರ್ಗಗಳ ಉದ್ಘಾಟನೆ, 3 ವರ್ಷಗಳಲ್ಲಿ ಒಂದೇ ಮಾತರಂ 400 ರೈಲು ಸಂಚಾರಕ್ಕೆ‌ ಕ್ರಮ ಕೈಗೊಂಡಿದ್ದು, 2023ಕ್ಕೆ ರೈಲುಗಳು ಸಂಚರಿಸಲಿವೆ. ಎಲ್ಲ ಕ್ಷೇತ್ರಗಳಲ್ಲೂ ದೇಶ ಮುಂದುವರೆದಿದ್ದು, 5ಜಿ ನೆಡ್ ವರ್ಕ್ ಸೇವೆ, ನಗರ, ಪಟ್ಟಣ, ಗ್ರಾಮೀಣ ಕ್ಷೇತ್ರದಲ್ಲಿ ಪ್ರಾರಂಭವಾಗಲಿದೆ. ಡಿಸೆಲ್, ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದು, ಇದನ್ನು ಕಡಿವಾಣ ಹಾಕಲು ಅಗತ್ಯ ಕ್ರಮ, ದೇಶಾದ್ಯಂತ ‌ಎಲೆಕ್ಟ್ರಿಕ್ ರೈಲು ಸಂಚಾರಕ್ಕೆ ಆದ್ಯತೆ‌ ನೀಡಿದೆ. ಪ್ರತಿಯೋಬ್ಬರೂ ಸ್ವಂತ ಸುರು ಕಟ್ಟುಕೊಳ್ಳಬೇಕು ಎನ್ನುವ ಸಂಕಲ್ಪ ಮೋದಿಜೀ ಅವರದ್ದಾಗಿದ್ದು, 80 ಮನೆಗಳನ್ನು ‌ಮಂಜೂರು ಮಾಡಿದ್ದಾರೆ, ಇದಕ್ಕೆ ಬಜೆಟ್‌ನಲ್ಲಿ 48 ಸಾವಿರ ಕೋಟಿ ‌ಮೀಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಬಜೆಟ್‌ ಬಗ್ಗೆ ಬಹಿರಂಗ ಪಡಿಸಲು ಆಗೋಲ್ಲ, ವಿಜಯನಗರ- ಬಳ್ಳಾರಿ ಅವಳಿ ಜಿಲ್ಲೆಗಳಿಗೆ ಸಾಕಷ್ಟು ಕೊಡುಗೆಗಳು ಸಿಗುವ ವಿಶ್ವಾಸವಿದೆ. ಹಗರಿ ಕೃಷಿ ಕಾಲೇಜು ಸ್ಥಾಪನೆಗೆ ಸಂಬಂದಿಸಿದಂತೆ ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಸಿ.ಎಂ.ಅವರಲ್ಲಿ ಮನವಿ ‌ಮಾಡಿದೆ. ಜಮೀನು ಲಭ್ಯವಿದೆ, ಸಿಬ್ಬಂದಿಗಳಿಗೆ ವೇತನ ಡಿಎಂಎಪ್ ಅಡಿ ನೀಡಲಾಗುವುದು, ಯಾವುದೇ ಸಮಸ್ಯೆ ಆಗೋಲ್ಲ, ನಮ್ಮ ಭಾಗದಲ್ಲಿ ಕೃಷಿ ಕಾಲೇಜು ಸ್ಥಾಪನೆಯಾದರೆ ನಮ್ಮ ವಿದ್ಯಾವಂತರಿಗೆ ರೈತರ‌ ಮಕ್ಕಳಿಗೂ ಅನುಕೂಲವಾಗಲಿದೆ ಎಂದು‌ ಮನವಿ ‌ಮಾಡಿದ್ದು, ರಾಜ್ಯ ‌ಬಜೆಟ್‌ನಲ್ಲಿ‌ ಪೋಷಣೆಯಾಗುವ ‌ವಿಶ್ವಾಸವಿದೆ. ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ ಎಂದರು.

ಈ ಸಂದರ್ಭದಲ್ಲಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಭಾಜಪ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ, ಮಾಜಿ ಸಂಸದರಾದ ಸಣ್ಣ ಫಕೀರಪ್ಪ, ಜೆ.ಶಾಂತಾ, ಎಮ್ಮೆಲ್ಸಿ ವೈ.ಎಂ.ಸತೀಶ್, ಮುಖಂಡರಾದ ಕೆ.ಎಸ್.ದಿವಾಕರ್, ಡಾ.ಮಹಿಪಾಲ್, ಸಫಾಯಿ ‌ಕರ್ಮಚಾರಿಗಳ ಅಭಿವೃದ್ಧಿ ‌ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ, ಮಾಧ್ಯಮ ವಕ್ತಾರ ರಾಜೀವ್, ಜಿಲ್ಲಾ ವಕ್ತಾರ ಡಾ.ಬಿ.ಕೆ.ಸುಂದರ್, ಅನೀಲ್ ನಾಯ್ಡು, ಗುರುಲಿಂಗನಗೌಡ, ಓಬಳೇಶ್ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!