ಜನಪ್ರಿಯ ಜಾಹೀರಾತುಗಳ ಚುಟುಕು ಹಾಡುಗಳ ಧಾಟಿಯಲ್ಲೇ ಯೋಗಿ-ಮೋದಿ ಜಬರ್ದಸ್ತ್ ಪ್ರಚಾರ ವಿಡಿಯೊ!

ಹೊಸದಿಗಂತ ಡಿಜಿಟಲ್ ಡೆಸ್ಕ್

ವಾಷಿಂಗ್ ಪೌಡರ್ ನಿರ್ಮಾ…. ಎಂದು ಆರಂಭವಾಗುವ ಜಾಹೀರಾತು ಹಾಡೊಂದು ಯಾರ ಮನದಲ್ಲಿಲ್ಲ ಹೇಳಿ? ಹಾಗೆಯೇ, ‘ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ’ ಎಂಬ ಘೋಷಣೆ, “ಇದು ಮೂಲೆ-ಮೂಲೆಗಳಲ್ಲಿ ಅವಿತಿರುವ ಕೀಟಾಣುಗಳನ್ನು ಕೊಲ್ಲುತ್ತದೆ” ಎಂಬ ಜಾಹೀರಾತು ವಾಕ್ಯ ಹಿಂದಿಯೂ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ಅಚ್ಚೊತ್ತಿರುವ ಸಂಗತಿಗಳು.
ಇಂಥ ಜಿಂಗಲ್, ಅದೇ ಧಾಟಿಯ ಸಾಲುಗಳನ್ನು ಬಳಸಿಕೊಂಡು ಇದೀಗ ಚುನಾವಣೆ ನಡೆಯುತ್ತಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಆಕರ್ಷಕ ಜಾಹೀರಾತುಗಳನ್ನು ಹರಿಬಿಟ್ಟಿದೆ. ಯೋಗಿ ಉತ್ತರ ಪ್ರದೇಶದಲ್ಲಿ ಅಕ್ರಮಗಳನ್ನೆಲ್ಲ ಹೇಗೆ ತೊಳೆದಿದ್ದಾರೆ, ಗೂಂಡಾಗಳನ್ನು ಕೀಟಾಣುಗಳಂತೆ ಹೇಗೆ ಹುಡುಕಿ ಮಟ್ಟಹಾಕುತ್ತಿದ್ದಾರೆ, ಹೆಣ್ಣುಮಕ್ಕಳಿಗೆ ಹೇಗೆ ಅಭಯ ಕಲ್ಪಿಸಿದ್ದಾರೆ ಎಂಬುದನ್ನೆಲ್ಲ, ಜನಮಾನಸದಲ್ಲಿ ಅದಾಗಲೇ ಅಚ್ಚೊತ್ತಿರುವ ಹಲವಾರು ನಿತ್ಯೋಪಯೋಗಿ ವಸ್ತುಗಳ ಜಾಹೀರಾತಿನ ಮಾದರಿಯಲ್ಲೇ ಪ್ರಸ್ತುತಪಡಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಇದು ಧೂಳೆಬ್ಬಿಸುವುದಕ್ಕೆ ಶುರುಮಾಡಿದೆ.
ನೀವೇ ನೋಡಿಬಿಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!