Sunday, December 3, 2023

Latest Posts

ಮೋದಿ ಅಪಶಕುನ: ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಸೋಲಿಗೆ ಪ್ರಧಾನಿ ಮೇಲೆ ಗೂಬೆ ಕೂರಿಸಿದ ರಾಹುಲ್ ಗಾಂಧಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಸೋಲಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಪ್ರಧಾನಿ ನರೇಂದ್ರ ಮೋದಿ (Nareandra Modi) ಮೇಲೆ ಗೂಬೆ ಕೂರಿಸಿದ್ದಾರೆ.

ರಾಜಸ್ಥಾನದ ಜಲೋರ್ ನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಅಪಶಕುನ. ಅವರದ್ದು ಐರೆನ್ ಲೆಗ್. ಹೀಗಾಗಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿದೆ ಎಂದು ಹೀಯಾಳಿಸಿದ್ದಾರೆ.

ನಮ್ಮ ಹುಡುಗರು ಬಹುತೇಕ ವಿಶ್ವಕಪ್ ಗೆಲ್ಲುತ್ತಿದ್ದರು. ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿಯೇ ಅಖಾಡಕ್ಕಿಳಿದಿದ್ದರು. ಆದರೆ ಕೆಟ್ಟ ಶಕುನವೊಂದು ಮೈದಾನ ಪ್ರವೇಶಿಸಿದ ಪರಿಣಾಮ ಕಪ್ ಕಳೆದುಕೊಳ್ಳುವಂತೆ ಮಾಡಿದೆ. ಅಲ್ಲದೇ ರಾಹುಲ್ ಗಾಂಧಿಯವರು ಜನರಿಂದಲೂ ಅಪಶುಕುನ ಎನ್ನುವ ಪದ ಹೇಳಿಸಿದರು.

ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆದ ಕ್ರಿಕೆಟ್ ವರ್ಲ್ಡ್ ಕಪ್ ನಲ್ಲಿ ಆಸ್ಟ್ರೇಲಿಯಾ ಮುಂದೆ ಭಾರತ ಫೈನಲ್ ಪಂದ್ಯವಿತ್ತು. ಈ ಪಂದ್ಯ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ (AmitShah) ಸೇರಿದಂತೆ ಸಿನಿ ತಾರೆಯರು ಕೂಡ ಭಾಗಿಯಾಗಿದ್ದರು. ಈ ಮ್ಯಾಚ್‍ನಲ್ಲಿ ಆಸೀಸ್ ಮುಂದೆ ಭಾರತ ಸೋಲು ಕಂಡಿತ್ತು. ಇದಾದ ಬಳಿಕ ಟೀಂ ಇಂಡಿಯಾ ಆಟಗಾರರಿದ್ದ ಡ್ರೆಸ್ಸಿಂಗ್ ರೂಮ್‍ಗೆ ತೆರಳಿದ್ದ ಮೋದಿ ಅವರನ್ನು ಸಮಾದಾನ ಪಡಿಸಿದ್ದರು. ಅಲ್ಲದೆ ನಿಮ್ಮ ಜೊತೆ ನಾವು ಇರುತ್ತೇವೆ ಎಮದು ಧೈರ್ಯ ತುಂಬಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!